ತಿರುವನಂತಪುರಂ: ರಾಜಧಾನಿಯಲ್ಲಿ ಭಾರೀ ಗಾಂಜಾ ಬೇಟೆ ನಡೆದಿದೆ. 100 ಕೆಜಿ ಗಾಂಜಾ ಸಹಿತ ನಾಲ್ವರನ್ನು ಬಂಧಿಸಿರುವ ಘಟನೆ ಕನ್ನೆತುಮುಕ್ ನಲ್ಲಿ ನಡೆದಿದೆ.
ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ದಳದವರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಲ್ಲಿ ವಂಚಿಯೂರು ಸಂಸ್ಕøತಿ ಕೇಂದ್ರದ ಎಸ್‍ಎಫ್‍ಐ ಘಟಕದ ಅಧ್ಯಕ್ಷ ಅಖಿಲ್ ಎಂಬಾತ ಕೂಡ ಸೇರಿದ್ದಾನೆ. ಕಾರಿನಲ್ಲಿದ್ದ ಮಹಿಳೆ ಪರಾರಿಯಾಗಿದ್ದಾಳೆ. ಪರಾರಿಯಾಗಿರುವ ಮಹಿಳೆ ಬಂಧಿತ ಆರೋಪಿಯ ಪತ್ನಿ ಎಂದು ತಿಳಿದುಬಂದಿದೆ.
ನಾಲ್ವರ ತಂಡ ಬಾಡಿಗೆ ವಾಹನದಲ್ಲಿ ಗಾಂಜಾ ಸಾಗಾಟ ನಡೆಸುತ್ತಿತ್ತು. ಆರೋಪಿಗಳು ನಾಲ್ಕು ದಿನಗಳ ಹಿಂದೆ ವಾಹನವನ್ನು ಬಾಡಿಗೆಗೆ ಪಡೆದಿದ್ದರು. ಮಾಲೀಕರು ಜಿಪಿಎಸ್ ಪರಿಶೀಲಿಸಿದಾಗ ವಾಹನ ಆಂಧ್ರ ತಲುಪಿರುವುದು ಪತ್ತೆಯಾಗಿದೆ. ಅನುಮಾನಗೊಂಡ ಮಾಲೀಕರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತನಿಖೆಯ ವೇಳೆ ನಾಲ್ವರನ್ನು ಬಂಧಿಸಲಾಗಿದೆ. ಅಬಕಾರಿ ತಂಡ ಬಂದಾಗ ವಾಹನ ನಿಲ್ಲಿಸಿ ಟೀ ಕುಡಿಯುತ್ತಿದ್ದರು. ಒಬ್ಬ ವ್ಯಕ್ತಿ ವಾಹನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.