ಕಣ್ಣೂರು: ವಿದ್ಯಾರ್ಥಿಗಳು ತಮ್ಮ ನಿರ್ಗತಿಕ ಸಹಪಾಠಿಗಳಿಗಾಗಿ ಸುಮಾರು 100 ಸೈಕಲ್‍ಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಪಯ್ಯನ್ನೂರು ಕಂಡಂಕಾಳಿ ಶೆಣೈ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಪೊಲೀಸ್ ಕೆಡೆಟ್‍ಗಳು ತಮ್ಮ ಸಹಪಾಠಿಗಳಿಗೆ ಸೈಕಲ್ ತಯಾರಿಸುತ್ತಿದ್ದಾರೆ. ಶಾಲೆ ತೆರೆಯುವ ಮುನ್ನವೇ ವಿದ್ಯಾರ್ಥಿಗಳು ಸೈಕಲ್ ತಯಾರಿಕೆ ಅಂತಿಮ ಹಂತದಲ್ಲಿ ತೊಡಗಿದ್ದಾರೆ.
ಹಳೆಯ ಬೈಸಿಕಲ್‍ಗಳನ್ನು ಸಂಗ್ರಹಿಸಿ ಮಾರ್ಪಾಡು ಮಾಡಿ ಪಾಲಿಶ್ ಮಾಡಿ ಹೊಸದಾಗಿ ರಚಿಸುತ್ತಿದ್ದಾರೆ. ಇದರ ಭಾಗವಾಗಿ ಹಳೆ ಸೈಕಲ್ ಬೇಕು ಎಂದು ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಒಂದು ವಾರದೊಳಗೆ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಂದ ಸುಮಾರು 100 ಮಂದಿ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದರು.
88 ವಿದ್ಯಾರ್ಥಿಗಳು ಸೈಕಲ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಸೈಕಲ್ ಮೆಕ್ಯಾನಿಕ್ ಓ.ಕೆ.ಪ್ರೇಮರಾಜ್ ವಿದ್ಯಾರ್ಥಿಗಳಿಗೆ ಈ ಚಟುವಟಿಕೆಯಲ್ಲಿ ನೆರವಾಗಿದ್ದಾರೆ. ಪರಿಕರ, ಬಣ್ಣ ಮತ್ತಿತರ ಸಾಮಗ್ರಿ ಖರೀದಿಸಲು ಸುಮಾರು 2 ಲಕ್ಷ ರೂ.ವೆಚ್ಚವಾಗಿದೆ. 1 ರಿಂದ ಪ್ಲಸ್ 1 ತರಗತಿಗಳಲ್ಲಿರುವ ಅರ್ಹ ಮಕ್ಕಳನ್ನು ತರಗತಿಯ ಶಿಕ್ಷಕರ ಮೂಲಕ ಗುರುತಿಸಲಾಗುತ್ತದೆ. ಶಾಲೆ ತೆರೆಯುವ ಮುನ್ನವೇ ಸೈಕಲ್ ವಿತರಿಸಲು ನಿರ್ಧರಿಸಲಾಗಿದೆ.