ಹೈದರಾಬಾದ್: ಯಮದೊಂಗ, ಮಗಧೀರ, ಬಾಹುಬಲಿ ಮತ್ತು ಆರ್ಆರ್ಆರ್ನಂತಹ ಹಿಟ್ ಸಿನೆಮಾಗಳನ್ನು ನೀಡಿದ ಖ್ಯಾತ ನಿರ್ದೇಶಕ ರಾಜ್ಮೌಳಿ ತಮ್ಮ ಕನಸಿನ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಈ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಮೌಳಿ ಮಹಾಭಾರತ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ.

ಖ್ಯಾತ ನಿರ್ದೇಶಕ ರಾಜ್ಮೌಳಿಗೆ ಕಾರ್ಯಕ್ರಮವೊಂದರಲ್ಲಿ, ಟಿವಿಯಲ್ಲಿ ಪ್ರಸಾರವಾದ ಮಹಾಭಾರತ ಸಿನಿಮಾ 266 ಎಪಿಸೋಡ್ಗಳನ್ನು ಒಳಗೊಂಡಿತ್ತು. ನಿಮ್ಮ ಕನಸಿನ ನೀವು ಈ ಹಿಂದೆ ಈ ಚಿತ್ರದ ಕುರಿತಾಗಿ ಮಾತನಾಡಿದ್ದೀರಿ, ಒಂದು ವೇಳೆ ನೀವು ಚಿತ್ರವನ್ನು ಮಾಡುವುದಾದರೆ ಎಷ್ಟು ಭಾಗಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತಿರಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.
ಇದಕ್ಕೆ ಉತ್ತರಿಸಿದ ರಾಜಮೌಳಿ, ಈ ಚಿತ್ರವನ್ನು ಮಾಡುವ ಮೊದಲು ದೇಶದ ಎಲ್ಲ ಆವೃತ್ತಿಗಳಲ್ಲಿ ಸಿಗುವ ಮಹಾಭಾರತವನ್ನು ಓದಿ ಅರ್ಥೈಸಿಕೊಳ್ಳಲು ಕನಿಷ್ಠ ಒಂದು ವರ್ಷ ಸಮಯಾವಕಾಶ ಬೇಕು. ಅದನ್ನು ಫೀಚರ್ ಫಿಲ್ಮ್ ರೀತಿ ಮಾಡಬೇಕಾದರೆ ಕನಿಷ್ಠ 10 ಭಾಗಗಳನ್ನಾಗಿ ಮಾಡಬೇಕು. ಆದರೆ ನಿಖರವಾಗಿ ಎಷ್ಟು ಆಗುತ್ತದೆ ಅಂತ ಗೊತ್ತಿಲ್ಲ ಎಂದಿದ್ದಾರೆ. ಇನ್ನು, ಈ ವಿಷಯವನ್ನು ಕೇಳಿದ್ದೆ ತಡ ಅಭಿಮಾನಿಗಳು, ರಾಜ್ಮೌಳಿ ನಿರ್ದೇಶನದಲ್ಲಿ ಹೇಗೆ ಮೂಡಿ ಬರಬಹುದೆಂದು ವಿಚಾರ ಮಾಡುತ್ತಿದ್ದಾರೆ.