ಕೊಲಂಬೊ: ಭಾರತದಿಂದ ನಿತ್ಯವು 10 ಲಕ್ಷ ಮೊಟ್ಟೆಗಳನ್ನು ಭಾರತದ ಐದು ಕೋಳಿಸಾಕಣೆ ಕೇಂದ್ರಗಳಿಂದ ಆಮದು ಮಾಡಿಕೊಳ್ಳಲು ಶ್ರೀಲಂಕಾ ನಿರ್ಧರಿಸಿದೆ ಎಂದು ದ್ವೀಪರಾಷ್ಟ್ರದ ಪ್ರಮುಖ ಆಮದು ಸಂಸ್ಥೆಯೊಂದು ಮಂಗಳವಾರ ತಿಳಿಸಿದೆ.
ಕೊಲಂಬೊ: ಭಾರತದಿಂದ ನಿತ್ಯವು 10 ಲಕ್ಷ ಮೊಟ್ಟೆಗಳನ್ನು ಭಾರತದ ಐದು ಕೋಳಿಸಾಕಣೆ ಕೇಂದ್ರಗಳಿಂದ ಆಮದು ಮಾಡಿಕೊಳ್ಳಲು ಶ್ರೀಲಂಕಾ ನಿರ್ಧರಿಸಿದೆ ಎಂದು ದ್ವೀಪರಾಷ್ಟ್ರದ ಪ್ರಮುಖ ಆಮದು ಸಂಸ್ಥೆಯೊಂದು ಮಂಗಳವಾರ ತಿಳಿಸಿದೆ.
'ಮೊಟ್ಟೆಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ.
'ಈ ಮೊಟ್ಟೆಗಳನ್ನು ಬೇಕರಿಗಳು, ಬಿಸ್ಕಟ್ ತಯಾರಿಕೆ ಕೇಂದ್ರಗಳು, ಆತಿಥ್ಯ ಸೇವೆ ಒದಗಿಸುವ ಸಂಸ್ಥೆಗಳು, ರೆಸ್ಟೋರೆಂಟ್‌ಗಳಿಗೆ ತಲಾ ಮೊಟ್ಟೆಗೆ ಶ್ರೀಲಂಕಾ ರೂಪಾಯಿ 35ರಂತೆ (ಭಾರತದ ₹ 9.74) ಬಿಡುಗಡೆ ಮಾಡಲಾಗುತ್ತಿದೆ' ಎಂದು ತಿಳಿಸಿದರು.
'ಪ್ರಸ್ತುತ ಎರಡು ಕೋಳಿಸಾಗಣೆ ಫಾರ್ಮ್‌ಗಳಿಂದ ಮೊಟ್ಟೆ ಆಮದು ಮಾಡಿಕೊಳ್ಳಲಾಗಿದೆ. ಪಶುಸಂಗೋಪನಾ ಇಲಾಖೆಯು ಇನ್ನೂ ಮೂರು ಫಾರ್ಮ್‌ಗಳಿಂದ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ' ಎಂದು ಅವರು ವಿವರಿಸಿದರು.
ಶ್ರೀಲಂಕಾವು ಒಂದು ವರ್ಷದಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಭಾರಿ ಹಣದುಬ್ಬರ ಖರೀದಿ ಸಾಮರ್ಥ್ಯವನ್ನು ಕುಗ್ಗಿಸಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ತೀವ್ರ ಕಸರತ್ತು ನಡೆಸುತ್ತಿದೆ ಎಂದರು.