ಕೊಚ್ಚಿ ಕರಾವಳಿಯಲ್ಲಿ ದೇಶದ ಅತಿ ದೊಡ್ಡ ಮಾದಕವಸ್ತು ಬೇಟೆ; 12,000 ಕೋಟಿ ಮೌಲ್ಯದ ಡ್ರಗ್ಸ್ ವಶ; ಪಾಕಿಸ್ತಾನ ಮೂಲದ ವ್ಯಕ್ತಿಯ ಬಂಧನ
ಕೊಚ್ಚಿ: ಕೊಚ್ಚಿ ಕರಾವಳಿಯಲ್ಲಿ ಭಾರೀ ಪ್ರಮಾಣದ ಮಾದಕವಸ್ತುಗಳನ್ನು ಬೇಟೆಯಾಡಲಾಗಿದೆ. ಇದು ದೇಶದ ಅತಿ ದೊಡ್ಡ ಮಾದಕ ದ್ರವ್ಯ ಬೇಟೆಯಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೀಡಿದ ಮಾಹಿತಿ ಪ್ರಕಾರ 2800 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
12,000 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ತನಿಖಾ ತಂಡ ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ಬಂಧಿಸಿದೆ.
ಎನ್‍ಸಿಬಿ ಮತ್ತು ಭಾರತೀಯ ನೌಕಾಪಡೆ ನಿನ್ನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮಾದಕವಸ್ತು ಹೇರಿ ಚಲಿಸುತ್ತಿದ್ದ ಹಡಗನ್ನು ತಂಡ ಹಿಡಿದಿದೆ. ಸಮುದ್ರಗುಪ್ತ ಹೆಸರಿನ ಕಾರ್ಯಾಚರಣೆಯ ಭಾಗವಾಗಿ ಡ್ರಗ್ ಬೇಟೆ ನಡೆದಿದೆ. ಸಮುದ್ರಗುಪ್ತ ಸಮುದ್ರದ ಮೂಲಕ ಡ್ರಗ್ ವಿರೋಧಿ ಕಾರ್ಯಾಚರಣೆಯಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಂತಹ ದೇಶಗಳಿಂದ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣೆಯನ್ನು ತಡೆಯುವುದು ಈ ಆಪರೇಷನ್ ನ ಗುರಿಯಾಗಿದೆ.
ಒಂದೇ ಬಾರಿಗೆ ಇμÉ್ಟೂಂದು ಡ್ರಗ್ಸ್ ವಶಪಡಿಸಿಕೊಂಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಮೆಥಾಂಫೆಟಮೈನ್ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 500 ಕೆಜಿ ಹೆರಾಯಿನ್ ಮತ್ತು 529 ಕೆಜಿ ಹಶಿಶ್ ವಶಪಡಿಸಿಕೊಳ್ಳಲಾಗಿದೆ. ಹಡಗಿನ ಮೂಲಕ ಪಾಕಿಸ್ತಾನ ಮತ್ತು ಇರಾನ್‍ನಿಂದ ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡಲಾಗಿತ್ತು. ಗೌಪ್ಯ ಮಾಹಿತಿ ಆಧರಿಸಿ ತನಿಖೆ ನಡೆಸಲಾಗಿದೆ. ತನಿಖೆ ಮುಂದುವರಿಯಲಿದೆ ಎಂದು ಎನ್‍ಸಿಬಿ ತಿಳಿಸಿದೆ. ಘಟನೆಯಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸಲಾಗುವುದು ಎಂದು ವರದಿಯಾಗಿದೆ.