HEALTH TIPS

12ನೇ ವಯಸ್ಸಿನಲ್ಲಿ ಮಕ್ಕಳು ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿದು!

 ಮಕ್ಕಳು ಚಿಕ್ಕವರಿಂದ ದೊಡ್ಡವರಾಗುವ ವರೆಗೂ ಒಂದೊಂದೇ ವಿಚಾರಗಳನ್ನು ನಿಧಾನವಾಗಿ ಕಲಿಯುತ್ತಾರೆ. ಈ ವಯಸ್ಸಿನಲ್ಲಿ ಇಂತಹದ್ದೇ ವಿಚಾರಗಳನ್ನು ಕಲಿಯಬೇಕು ಅಂತಿರುತ್ತದೆ. ಆಯಾ ವಯಸ್ಸಿನಲ್ಲಿ ಮಕ್ಕಳು ಕೆಲವೊಂದು ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕಾಗಿರೋದು ಅನಿವಾರ್ಯ. ಅದೇ ರೀತಿ 12 ವಯಸ್ಸಿನಲ್ಲಿ ಕೆಲವೊಂದು ಕೌಶಲ್ಯಗಳನ್ನು ಮಕ್ಕಳು ಅಭಿವೃದ್ಧಿ ಪಡಿಸಬೇಕು. ಹಾಗಾದ್ರೆ ಆ ಕೌಶಲ್ಯಗಳು ಯಾವುದು ಅನ್ನೋದನ್ನು ತಿಳಿಯೋಣ.

1. ತಮಗಾಗಿ ಅಡುಗೆ ಮಾಡೋದಕ್ಕೆ ಕಲಿತರಬೇಕು
ಹನ್ನೆರಡನೇ ವಯಸ್ಸಿನಲ್ಲಿ ಮಕ್ಕಳು ಏಳನೇ ತರಗತಿಯಲ್ಲಿ ಓದುತ್ತಿರುತ್ತಾರೆ. ಆಟ- ಪಾಠಗಳನ್ನು ಅವರು ಶಾಲೆಯಲ್ಲಿ ಕಲಿತಿರುತ್ತಾರೆ. ಆದರೆ ಕೆಲವೊಂದು ಕೌಶಲ್ಯಗಳು ಅವರಿಗೆ ಮನೆಯಿಂದಲೇ ರೂಢಿಯಾಗಬೇಕು. ಅದ್ರಲ್ಲಿ ಮುಖ್ಯವಾಗಿ ಚಿಕ್ಕ- ಪುಟ್ಟ ಅಡುಗೆ ಮಾಡೋದಕ್ಕೆ ಗೊತ್ತಿರಬೇಕು ಯಾಕಂದ್ರೆ ಮನೆಯಲ್ಲಿ ಯಾರೂ ಇಲ್ಲದಾಗ ಅವರು ಏನಾದರೂ ಆಹಾರವನ್ನು ತಯಾರಿಸಿ ತಿನ್ನಬಹುದು. ತಮ್ಮ ಒಡಹುಟ್ಟಿದವರಿಗೂ ಹಸಿವಾದಾಗ ಮನೆಯಲ್ಲಿ ತಿನ್ನೋದಕ್ಕೆ ಏನೂ ಇಲ್ಲದಾಗ ಆಹಾರ ತಯಾರಿಸಿ ಕೊಡಬಹುದು.

2. ಬಟ್ಟೆ ಒಗೆಯೋದಕ್ಕೆ ಸಹಾಯ ಮಾಡಬೇಕು
ಹನ್ನೆರಡನೇ ವಯಸ್ಸಿನಲ್ಲಿ ಮಕ್ಕಳ ಸಾಕಷ್ಟು ಪ್ರಬುದ್ಧರಾಗಿರುತ್ತಾರೆ. ಈ ವೇಳೆ ನಿಮ್ಮ ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡುವ ಅಗತ್ಯ ಇರುವುದಿಲ್ಲ. ಮಕ್ಕಳು ಖಂಡಿತ ನಿಮಗೆ ಚಿಕ್ಕ- ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಬಹುದು. ಅದ್ರಲ್ಲಿ ಮುಖ್ಯವಾಗಿ ಬಟ್ಟೆ ಒಗೆಯುವಾಗ ಮಕ್ಕಳಿಗೆ ಸಹಾಯ ಮಾಡಬಹುದು. ಬಟ್ಟೆ ಒಣಗಿಸುವ ಸಂದರ್ಭದಲ್ಲಿ ಅಥವಾ ಬಟ್ಟೆಯನ್ನು ವಾಷಿಂಗ್‌ ಮೆಷಿನ್‌ಗೆ ಹಾಕಲು ಅವರ ಸಹಾಯ ಪಡೆದುಕೊಳ್ಳಿ.

3. ಒಂಟಿಯಾಗಿ ಪ್ರಯಾಣ ಮಾಡೋದಕ್ಕೆ ಅಭ್ಯಾಸ ಮಾಡಿಸಿ
ಹನ್ನೆರಡನೇ ವಯಸ್ಸಿಗೆ ಮಕ್ಕಳು ಸ್ವಂತವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡೋದಕ್ಕೆ ಕಲಿತಿರಬೇಕು. ಯಾಕಂದ್ರೆ ಒಂದು ವೇಳೆ ಯಾವತ್ತಾದರೂ ಬಸ್‌ ಅಥವಾ ಟ್ರೈನ್‌ ಮಿಸ್‌ ಆದರೆ ಒಬ್ಬರೇ ಮನೆಗೆ ತಲುಪುವಷ್ಟು ಸಾಮರ್ಥ್ಯ ಅವರಿಗೆ ಇರಬೇಕು. ಹೀಗಾಗಿ ಈ ವಯಸ್ಸಿನಲ್ಲೇ ಅವರಿಗೆ ದೈರ್ಯ ತುಂಬಿ ಸ್ವತತ್ರವಾಗಿರೋದನ್ನು ಅಭ್ಯಾಸ ಮಾಡಿಸಿ.

4. ಮಕ್ಕಳು ಶಾಲೆಯಿಂದ ಅವರಾಗಿಯೇ ಬರಬೇಕು
ಇತ್ತೀಚಿಗಂತೂ ಪೋಷಕರು ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡುತ್ತಾರೆ. ಮಕ್ಕಳ ಶಾಲೆ ಹತ್ತಿರದಲ್ಲಿ ಇದ್ದರೂ ಕೂಡ ಅವರನ್ನು ಶಾಲೆಗೆ ಕರೆದುಕೊಂಡು ಹೋಗುವ ಹಾಗೂ ಶಾಲೆಯಿಂದ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಪೋಷಕರೇ ಹೊತ್ತುಕೊಳ್ಳುತ್ತಾರೆ. ಇದರ ಬದಲಾಗಿ ಅವರು ಸ್ನೇಹಿತರೊಂದಿಗೆ ಬಂದರೆ ಒಳ್ಳೆಯದು. ಆಗ ಅವರು ಸ್ವತಂತ್ರವಾಗಿ ಬದುಕೋದಕ್ಕೆ ಕಲಿಯುತ್ತಾರೆ.

5. ಶಾಪಿಂಗ್‌ಗೆ ಕರೆದುಕೊಂಡು ಹೋಗಿ
ಪೋಷಕರು ಶಾಪಿಂಗ್‌ ಹೋಗುವಾಗ ಮಕ್ಕಳನ್ನು ಕರೆದುಕೊಂಡು ಹೋಗಿ. ಆಗ ಮಕ್ಕಳು ಮನೆಗೆ ಬೇಕಾಗಿರುವ ಸಾಮಾಗ್ರಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಒಂದು ಸಾರಿ ಅವರು ಕಲಿತುಕೊಂಡರೆ ಮುಂದಿನ ದಿನಗಳಲ್ಲಿ ಅವರೇ ಖುದ್ದಾಗಿ ಹೋಗಿ ಶಾಪಿಂಗ್‌ ಮಾಡಿಕೊಂಡು ಬರಬಹುದು. ಈ ಮೂಲಕ ನಿಮ್ಮ ಹನ್ನೆರಡನೇ ವಯಸ್ಸಿನ ಮಗು ಜವಾಬ್ದಾರಿಯನ್ನು ಕಲಿತುಕೊಳ್ಳುತ್ತದೆ.

6. ಮಕ್ಕಳನ್ನು ಗೆಜೆಟ್‌ಗಳಿಂದ ದೂರವಿರಿಸಿ
ಈ ವಯಸ್ಸಿನಲ್ಲಿ ಮಕ್ಕಳು ಗೆಜೆಟ್‌ಗಳ ದಾಸರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮಕ್ಕಳು ಕರಾಟೆ, ಡಾನ್ಸ್‌, ಸಂಗೀತ ಹೀಗೆ ಪಠ್ಯೇತರ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ. ಬಿಡುವಿನ ಸಮಯದಲ್ಲಿ ಹೊರಗಡೆ ಮಕ್ಕಳ ಜೊತೆಗೆ ಆಟವಾಡೋದಕ್ಕೆ ತಿಳಿಸಿ. ಇದು ಮಕ್ಕಳನ್ನು ಗೆಜೆಟ್‌ನಿಂದ ದೂರವಾಗಿರುವಂತೆ ನೋಡಿಕೊಳ್ಳೋದು ಮಾತ್ರವಲ್ಲದೇ ಅವರ ಸರ್ವತೋಮುಖ ಅಭಿವೃದ್ಧಿಗೂ ಸಹಾಯಕಾರಿಯಾಗಿದೆ.

7. ಉತ್ತಮ ನಡವಳಿಕೆ ಬೆಳೆಸಿ
ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಏನು ಕಲಿಯುತ್ತಾರೋ ದೊಡ್ಡದಾದ ಮೇಲೂ ಅದೇ ನಡವಳಿಕೆಯನ್ನು ರೂಢಿಸಿಕೊಳ್ಳುತ್ತಾರೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಯಾರಾದರೂ ಸಹಾಯ ಮಾಡಿದರೆ ಥ್ಯಾಂಕ್ಸ್‌ ಹೇಳೋದನ್ನು ಅಭ್ಯಾಸ ಮಾಡಿಸಿ. ತಪ್ಪಾದಾಗ ಕ್ಷಮೆ ಕೇಳುವ ಗುಣ ಇರಲಿ, ದೊಡ್ಡವರಿಗೆ ಎದುರು ಮಾತನಾಡದಂತೆ ನೋಡಿಕೊಳ್ಳಿ. ಸಮಯ ಪ್ರಜ್ಞೆ ಇರಲಿ, ಶಿಸ್ತಿನ ಜೀವನವನ್ನು ರೂಢಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಸಿ.

8. ದುಡ್ಡಿನ ಮಹತ್ವ ತಿಳಿಸಿ
ಇತ್ತೀಚಿನ ಮಕ್ಕಳು ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಪೋಷಕರು ಬೇಕಾದದ್ದನ್ನು ತೆಗೆದು ಕೊಡೋದ್ರಿಂದ ಅವರಿಗೆ ದುಡ್ಡಿನ ಮಹತ್ವ ಬಗ್ಗೆ ಗೊತ್ತಿಲ್ಲ. ಪೋಷಕರು ದುಡಿಯಲು ಎಷ್ಟು ಕಷ್ಟ ಪಡುತ್ತಾರೆ ಅನ್ನೋದನ್ನು ಅವರು ಅರಿತಿರೋದಿಲ್ಲ. ಹೀಗಾಗಿ ಮೊದಲಿಗೆ ನಿಮ್ಮ ಮಗುವಿಗೆ ಹಣದ ಮಹತ್ವದ ಬಗ್ಗೆ ತಿಳಿಸಿ. ಒಂದೊಂದು ರೂಪಾಯಿಗೂ ಎಷ್ಟು ಕಷ್ಟ ಪಡಬೇಕು ಅನ್ನೋದನ್ನು ಅರ್ಥ ಮಾಡಿಸಿ.

ಈ ಎಲ್ಲಾ ವಿಚಾರಗಳು ಮಕ್ಕಳಿಗೆ ಹನ್ನೆರಡನೇ ವಯಸ್ಸಿನಲ್ಲಿ ತಿಳಿದಿದ್ದರೆ ತುಂಬಾನೇ ಒಳ್ಳೆಯದು. ಇದು ಅವರ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries