ಕೊಚ್ಚಿ: ಸಿನಿಮಾ ವೀಕ್ಷಿಸಲು ಜನರಿಲ್ಲದ ಕಾರಣ ಚಿತ್ರಮಂದಿರಗಳು ಬಿಕ್ಕಟ್ಟು ಎದುರಿಸುತ್ತಿವೆ ಎಂದು ಥಿಯೇಟರ್ ಮಾಲೀಕರ ಸಂಘ ಫಿಯೋಕ್ ಹೇಳಿದೆ.
ಈಗಾಗಲೇ ಮೂರು ಚಿತ್ರಮಂದಿರಗಳನ್ನು ಜಪ್ತಿ ಮಾಡಲಾಗಿದೆ. ಸುಮಾರು 15 ಚಿತ್ರಮಂದಿರಗಳು ಯಾವುದೇ ಕ್ಷಣದಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ ಭೀತಿ ಎದುರಾಗಿದೆ. ಇವುಗಳಲ್ಲಿ ಹೆಚ್ಚಿನವು ಒಂದಕ್ಕಿಂತ ಹೆಚ್ಚು ಪರದೆಗಳನ್ನು ಹೊಂದಿವೆ ಎಂದು ಎಫ್‍ಐಒಸಿ ಅಧ್ಯಕ್ಷ ಕೆ. ವಿಜಯಕುಮಾರ್ ಹೇಳಿರುವರು.
ಹತ್ತು ವರ್ಷಗಳ ಹಿಂದೆ ಕೇರಳದಲ್ಲಿ 1250 ಸ್ಕ್ರೀನ್‍ಗಳಿದ್ದವು, ಈಗ ಕೇವಲ 613 ಸ್ಕ್ರೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಐದು ವರ್ಷಗಳಲ್ಲಿ ಗರಿಷ್ಠ ಸಂಖ್ಯೆಯ ಚಿತ್ರಮಂದಿರಗಳು ಮುಚ್ಚಿವೆ. ಪ್ರೇಕ್ಷಕರು ಥಿಯೇಟರ್ ಗಳಿಗೆ ಆಗಮಿಸದಿದ್ದರೆ ವರ್ಷಾಂತ್ಯದೊಳಗೆ ಉಳಿದ ಸ್ಕ್ರೀನ್ ಗಳನ್ನು ಮುಚ್ಚಬೇಕಾದೀತು ಎಂಬ ಆತಂಕ ಚಿತ್ರರಂಗವನ್ನು ಕಾಡುತ್ತಿದೆ.
ಇತ್ತೀಚಿಗೆ ಬಿಡುಗಡೆಯಾದ ಶೇಕಡ 50ರಷ್ಟು ಚಿತ್ರಗಳು ಹಲವು ಥಿಯೇಟರ್‍ಗಳಲ್ಲಿ ತೆರೆ ಕಂಡಿಲ್ಲ. ಈ ಬಿಕ್ಕಟ್ಟು ಮುಂದುವರಿಯುತ್ತದೆ ಎಂದು ಕೆ. ವಿಜಯಕುಮಾರ್ ಹೇಳಿದರು.