ತಿರುವನಂತಪುರಂ: ಕೇರಳದ ಪ್ರಮುಖ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆ ಮತ್ತು ಚಿನ್ನದ ಆಭರಣ ಸಾಲದಲ್ಲಿ ಭಾರತದ ಅತ್ಯುತ್ತಮ ಕಂಪನಿಯಾದ ಮಣಪ್ಪುರಂ ಫೈನಾನ್ಸ್ ಮತ್ತು ಮಾಲೀಕರ ಮನೆ ಮೇಲೆ ದಾಳಿ. ತ್ರಿಶೂರ್ ಜಿಲ್ಲೆಯ ಮಣಪ್ಪುರಂ ಫೈನಾನ್ಸ್‍ನ ವಲಪದುಲ್ ಕೇಂದ್ರ ಕಚೇರಿಯಲ್ಲಿ ಮಾಲೀಕ ವಿ.ಪಿ. ನಂದಕುಮಾರ್ ಮನೆ ಮೇಲೂ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ದಾಳಿಯ ಬೆನ್ನಿಗೇ ಮಣಪ್ಪುರಂ ಫೈನಾನ್ಸ್‍ನ ಷೇರಿನ ಬೆಲೆ ಬುಧವಾರ ಶೇ.12 ರಷ್ಟು ಕುಸಿದಿತ್ತು. ರೂ.129.70ರಷ್ಟಿದ್ದ μÉೀರು ಸುಮಾರು ರೂ.15.85ರಷ್ಟು ಕುಸಿದು ರೂ.113.85ಕ್ಕೆ ತಲುಪಿತು.
ಕೊಚ್ಚಿಯಿಂದ ಬಂದಿದ್ದ ಇಡಿ ಅಧಿಕಾರಿಗಳು ಕಳೆದ ನಾಲ್ಕು ಗಂಟೆಗಳಿಂದ ಮಣಪ್ಪುರಂ ಗ್ರೂಪ್‍ನ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಯಿಲ್ಲದೆ ಸಾರ್ವಜನಿಕರಿಂದ 150 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇಡಿ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ.
ಇದರೊಂದಿಗೆ ಕೆವೈಸಿ ಇಲ್ಲದೆ ಕೋಟ್ಯಂತರ ರೂಪಾಯಿ ವಿನಿಮಯ ನಡೆದಿರುವುದನ್ನು ಇಡಿ ಪತ್ತೆ ಹಚ್ಚಿದೆ. ಏಕಕಾಲಕ್ಕೆ ನಾಲ್ಕು ಕಡೆ ದಾಳಿ. ಇಡಿ ತಂಡ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಮೂರು ದಶಕಗಳಿಂದ ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣಪ್ಪುರಂ ಚಿನ್ನದ ಸಾಲ, ಕಿರುಬಂಡವಾಳ ಮತ್ತು ಗೃಹ ಸಾಲಗಳಂತಹ ಕ್ಷೇತ್ರಗಳ ಮೇಲೆ ಹೆಚ್ಚು ಗಮನಹರಿಸುತ್ತದೆ.