ಜಲಂಧರ್: ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಎರಡು ಡ್ರೋನ್‌ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸಿದ ಗಡಿ ಭದ್ರತಾ ಪಡೆಯು(ಬಿಎಸ್‌ಎಫ್), ಡ್ರೋನ್‌ಗಳಲ್ಲಿದ್ದ 15 ಕೆ.ಜಿ.ಗೂ ಅಧಿಕ ಮಾದಕ ದ್ರವ್ಯ ಪದಾರ್ಥವನ್ನು ವಶಪಡಿಸಿಕೊಂಡಿದೆ.
ಜಲಂಧರ್: ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಎರಡು ಡ್ರೋನ್‌ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸಿದ ಗಡಿ ಭದ್ರತಾ ಪಡೆಯು(ಬಿಎಸ್‌ಎಫ್), ಡ್ರೋನ್‌ಗಳಲ್ಲಿದ್ದ 15 ಕೆ.ಜಿ.ಗೂ ಅಧಿಕ ಮಾದಕ ದ್ರವ್ಯ ಪದಾರ್ಥವನ್ನು ವಶಪಡಿಸಿಕೊಂಡಿದೆ.
ಅಮೃತಸರದ ರಾಮ್‌ಕೋಟ್ ಹಳ್ಳಿಯಲ್ಲಿ ಮಧ್ಯರಾತ್ರಿ ವೇಳೆ ಡ್ರೋನ್ ಹಾರಾಟದ ಶಬ್ದ ಕೇಳಿಸಿದ್ದು, ತಕ್ಷಣವೇ ಎಚ್ಚೆತ್ತ ಬಿಎಸ್‌ಎಫ್ ಯೋಧರು ಡ್ರೋನ್ ಕೆಳಗಿಳಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಅದೇ ವೇಳೆಗೆ ಡ್ರೋನ್‌ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಮಾದಕ ಪದಾರ್ಥ ಸಂಗ್ರಹಿಸಲು ಮೂವರು ವ್ಯಕ್ತಿಗಳು ಯತ್ನಿಸುತ್ತಿದ್ದರು. ಡ್ರೋನ್ ಹೊಡೆದುರುಳಿಸಿ, ಯೋಧರು ಸ್ಥಳ ತಲುಪುವಷ್ಟರಲ್ಲಿ ಆ ಮೂವರು ಪರಾರಿಯಾಗಿದ್ದಾರೆ. ಸ್ಥಳದಿಂದ ಐದು ಪೊಟ್ಟಣ ಮಾದಕ ದ್ರವ್ಯ ವಶಪಡಿಸಿಕೊಂಡರು ಎಂದು ಬಿಎಸ್‌ಎಫ್ ವಕ್ತಾರರು ಬುಧವಾರ ತಿಳಿಸಿದ್ದಾರೆ.
ಅಲ್ಲದೆ, ಇದೇ ಜಿಲ್ಲೆಯ ಕಕ್ಕಡ್ ಗ್ರಾಮದಲ್ಲಿ ರಾತ್ರಿ 1.20ರವೇಳೆಗೆ ದೇಶದ ವಾಯುಗಡಿ ಉಲ್ಲಂಘಿಸಿ, ಪಾಕಿಸ್ತಾನದ ಮತ್ತೊಂದು ಡ್ರೋನ್ ಒಳನುಸುಳಿದ ಘಟನೆ ನಡೆಯಿತು. ಆಗ ಯೋಧರು ಡ್ರೋನ್ ಹೊಡೆದುರುಳಿಸಿ, ಐದು ಪೊಟ್ಟಣ ಮಾದಕ ದ್ರವ್ಯವನ್ನು ವಶಪಡಿಸಿಕೊಂಡರು ಎಂದು ವಕ್ತಾರರು ಹೇಳಿದ್ದಾರೆ.