ಮಥುರಾ: ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ವ್ಯಕ್ತಿಗೆ ಮಥುರಾದ ಪೋಕ್ಸೊ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ರಾಮ್ ಕಿಶೋರ್ ಯಾದವ್ ಅವರು, ಎರಡೂ ಕಡೆಯ ವಾದ ಆಲಿಸಿದ ನಂತರ ಆರೋಪಿ ಮೊಹಮ್ಮದ್ ಸೈಫ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ ಎಂದು ವಿಶೇಷ ಜಿಲ್ಲಾ ಸರ್ಕಾರಿ ವಕೀಲ(ಡಿಜಿಸಿ) ಅಲ್ಕಾ ಉಪ್ಮನ್ಯು ಅವರು ಹೇಳಿದ್ದಾರೆ.
ನ್ಯಾಯಾಧೀಶರು ಕೇವಲ 15 ದಿನಗಳ ವಿಚಾರಣೆ ಬಳಿಕ ತೀರ್ಪು ಪ್ರಕಟಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಏಪ್ರಿಲ್ 9 ರಂದು ಮಥುರಾದ ಔರಂಗಾಬಾದ್ ಪ್ರದೇಶದಲ್ಲಿ ಬಾಲಕ ಕಾಣೆಯಾದ ಬಗ್ಗೆ ಅಪ್ರಾಪ್ತ ಬಾಲಕನ ತಂದೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಮರುದಿನ, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಪೊಲೀಸರು ಪ್ರಸ್ತುತ ಔರಂಗಾಬಾದ್‌ನಲ್ಲಿ ವಾಸಿಸುತ್ತಿರುವ ಕಾನ್ಪುರ ನಿವಾಸಿ ಸೈಫ್‌ನನ್ನು ಬಂಧಿಸಿದ್ದರು. ಸೈಫ್ ಮೃತ ಬಾಲಕನ ಚಿಕ್ಕಪ್ಪನ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು.
ವಿಚಾರಣೆಯಲ್ಲಿ, ಆರೋಪಿಯು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿದ್ದನು. ಬಳಿಕ ಪೊಲೀಸರು ನಾಪತ್ತೆ ಪ್ರಕರಣವನ್ನು ಹತ್ಯೆ ಪ್ರಕರಣವಾಗಿ ಪರಿವರ್ತಿಸಲಾಯಿತು. ಭಾರತೀಯ ದಂಡ ಸಂಹಿತೆ(IPC) ಮತ್ತು 6 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ POCSO) ಕಾಯಿದೆ ಅಡಿ ಕೇಸ್ ದಾಖಲಿಸಲಾಗಿತ್ತು.