ತಿರುವನಂತಪುರಂ: ಪಿಣರಾಯಿ ವಿಜಯನ್ ಸÀರ್ಕಾರ ಮಾಸಿಕ 1600 ರೂ.ಗಳ ಸಮಾಜ ಕಲ್ಯಾಣ ಪಿಂಚಣಿ ನೀಡುತ್ತಿದೆ ಎಂದು ಮಲಯಾಳಂ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗಿದೆ.
ಕೇರಳದ ಹೊರಗಿನ ಇಂಗ್ಲಿಷ್ ಪತ್ರಿಕೆಗಳಲ್ಲಿ ಇದಕ್ಕೆ ತದ್ವಿರುದ್ದವಾಗಿ ಮಾಸಿಕ ಸಮಾಜ ಕಲ್ಯಾಣ ಪಿಂಚಣಿ 11,600 ರೂ.ಎಂದು 7.25 ಪಟ್ಟು ದ್ವಿಗುಣವಾಗಿ ಪ್ರಕಟಗೊಂಡಿದೆ. ಸರ್ಕಾರದ ಎರಡನೇ ವರ್ಷಾಚರಣೆ ಸಂದರ್ಭದಲ್ಲಿ ನೀಡಿದ ಜಾಹೀರಾತಿನಲ್ಲಿ ಇಂತಹದೊಂದು ಸುಳ್ಳು ಪ್ರಚಾರ ಬಹಿರಂಗಗೊಂಡಿದೆ. ಕೇಂದ್ರದ ಎಲ್ಲ ಯೋಜನೆಗಳನ್ನು ತನ್ನ ಆಡಳಿತಾತ್ಮಕ ಸಾಧನೆ ಎಂದು ಬಿಂಬಿಸುವ ಮೂಲಕ ಕೇರಳ ಸರ್ಕಾರ ತನ್ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದರ ಜಾಹೀರಾತಿಗೆ ಕೋಟಿಗಟ್ಟಲೆ ಖರ್ಚು ಮಾಡಲಾಗುತ್ತದೆ. ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಯೋಜನಾ ವೆಚ್ಚದ ಶೇಕಡ ಎರಡೂವರೆ ಕಡಿಮೆ ಭೂಸ್ವಾಧೀನಕ್ಕೆ 5000 ಕೋಟಿ ನೀಡಿತ್ತು.
ಜಗತ್ತೇ ಆಧುನಿಕ ವ್ಯವಸ್ಥೆಗಳ ಅಡಿಯಲ್ಲಿ ಬೆರಳ ತುದಿಯಲ್ಲಿರುವಾಗಲೂ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಸಾಹಸ ಮಾಡುವವರು ಎಂತಹ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ ಬಿಜೆಪಿ ವಕ್ತಾರ ಸಂದೀಪ್ ವಾಚಸ್ಪತಿ, ಅವರ ಸುಳ್ಳನ್ನು ನಂಬಿ ಕಮ್ಯುನಿಸಂ ದೊಡ್ಡ ವಿಷಯ ಎಂದು ಭಾವಿಸುವವರು ತಲೆ ಕೆಡಿಸಿಕೊಳ್ಳಬೇಕು ಎಂದಿರುವರು. ವಾಳಯಾರ್ ಗಡಿ ದಾಟಿದರೆ ನಂತರ ಸಿಪಿಎಂಗೆ ಯಾವುದೇ ಸ್ಥಾನವಿಲ್ಲ. ಆದರೆ ಅಸ್ವಸ್ಥತೆ ಹಲವು ಪಟ್ಟು ಹೆಚ್ಚು ಇರುತ್ತದೆ ಎಂದು ಸಂದೀಪ್ ವಾಚಸ್ಪತಿ ಆಕ್ಷೇಪ ವ್ಯಕ್ತಪಡಿಸಿರುವರು.