ಅಲಪ್ಪುಳ: ಕಾತ್ರ್ಯಾಯಿನಿ ಅಮ್ಮ ಅವರು 98 ನೇ ವಯಸ್ಸಿನಲ್ಲಿ ಕೇರಳದ ಸಾಕ್ಷರತಾ ಪರೀಕ್ಷೆಯಲ್ಲಿ ಸಾಧಿಸಿದ ಯಶಸ್ಸು ರಾಜ್ಯದ ಅನೇಕರಿಗೆ, ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿ ಅವಕಾಶವನ್ನು ಕಳೆದುಕೊಂಡವರಿಗೆ ತಮ್ಮ ಅಧ್ಯಯನವನ್ನು ಪುನರಾರಂಭಿಸಲು ಪ್ರಚೋದನೆಯಾಗಿದೆ. ಹರಿಪ್ಪಾಡ್ ಮೂಲದ ಇವರು ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ (ಕೆ.ಎಸ್.ಎಲ್.ಎಂ.ಎ) ನಡೆಸಿದ ಅಕ್ಷರಲಕ್ಷಂ ಪರೀಕ್ಷೆಯಲ್ಲಿ 98 ಶೇ. ಅಂಕ ಗಳಿಸಿದ್ದರು.
ಈ ಸಾಧನೆಯಿಂದ ಪ್ರೇರಿತರಾಗಿ, ಶನಿವಾರ ಆರಂಭವಾದ 11 ಮತ್ತು 12ನೇ ತರಗತಿಯ ಸಮಾಂತರ ಪರೀಕ್ಷೆಗಳಿಗೆ 1,700ಕ್ಕೂ ಹೆಚ್ಚು ಮಂದಿ ಹಾಜರಾಗಿದ್ದರು. ವೃದ್ಧಾಪ್ಯದಲ್ಲಿ ತರಗತಿಗಳನ್ನು ತೆಗೆದುಕೊಳ್ಳುವ ಮತ್ತು ಪರೀಕ್ಷೆಗಳಿಗೆ ಹಾಜರಾಗುವ ಇರಿಸು-ಮುರುಸು ಕಾತ್ರ್ಯಾಯಿನಿ ಅಮ್ಮನ ಯಶಸ್ಸಿನ ನಂತರ ಸಮಾಜದಿಂದ ಕಣ್ಮರೆಯಾಯಿತು. ಈಗ ಸರಾಸರಿ 1,000 ವಿದ್ಯಾರ್ಥಿಗಳು ಸಮಾಂತರ ಕೋರ್ಸ್‍ಗಳಿಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ ಮತ್ತು ಅನೇಕರು ಈಗಾಗಲೇ ಪ್ಲಸ್ ಟು ಯಶಸ್ವಿಯಾಗಿ ಮುಗಿಸಿ ತಮ್ಮ ಪದವಿಯನ್ನು ಪ್ರಾರಂಭಿಸಿದ್ದಾರೆ ಎಂದು ಕೆಎಸ್‍ಎಲ್‍ಎಂಎ ಸಂಯೋಜಕ ಕೆ ವಿ ರತೀಶ್ ಹೇಳುತ್ತಾರೆ.
1,080 ಕ್ಕೂ ಹೆಚ್ಚು ಜನರು ಪ್ಲಸ್ ಒನ್ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 839 ಮಹಿಳೆಯರು. ಮತ್ತು 646 ವಿದ್ಯಾರ್ಥಿಗಳು ಪ್ಲಸ್ ಟು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 479 ಮಹಿಳೆಯರು. ಪಲ್ಲಿಪುರಂನ ಸಿ ವಿ ಸುರೇಂದ್ರನ್ (74) ಅವರು ಪರೀಕ್ಷೆಗೆ ಹಾಜರಾಗುತ್ತಿರುವ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಹಲವರಲ್ಲಿ ಹದಿನೈದು ಜನ ಪ್ರತಿನಿಧಿಗಳೂ ಸೇರಿದ್ದಾರೆ. ಪರೀಕ್ಷೆ ನಾಳೆ(ಮೇ 25) ಮುಕ್ತಾಯಗೊಳ್ಳಲಿದೆ.
ಜಿಲ್ಲೆಯಲ್ಲಿ ಎಂಟು ಪರೀಕ್ಷಾ ಕೇಂದ್ರಗಳಿವೆ. ಪ್ರಸ್ತುತ, ಮಾನವಿಕ ಮತ್ತು ವಾಣಿಜ್ಯ ಶಾಖೆಗಳಲ್ಲಿ ಕೋರ್ಸ್‍ಗಳನ್ನು ನೀಡಲಾಗುತ್ತದೆ. ಕಾತ್ರ್ಯಾಯಿನಿ 2018 ರಲ್ಲಿ ನಡೆಸಿದ ಅಕ್ಷರಲಕ್ಷಂ ಸಾಕ್ಷರತಾ ಪರೀಕ್ಷೆಯಲ್ಲಿ 100 ರಲ್ಲಿ 98 ಅಂಕಗಳನ್ನು ಗಳಿಸಿದ ನಂತರ ಖ್ಯಾತಿಯನ್ನು ಗಳಿಸಿದರು. ಆಗ ಆಕೆಗೆ 98 ವರ್ಷ. ಅವರು ಆವರೆಗೆ ಶಾಲೆಗೆ ಹೋಗಿರಲಿಲ್ಲ ಮತ್ತು ಮನೆ ಸಹಾಯಕಿ ಮತ್ತು ಶುಚಿಗೊಳಿಸುವ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಆಕೆಯ ಸಾಧನೆಗಾಗಿ, ಅವರು ಮಾರ್ಚ್ 8, 2020 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ನಾರಿ ಶಕ್ತಿ ಪುರಸ್ಕಾರವನ್ನು ಪಡೆದರು. ಅವರು ತಮ್ಮ ಅಧ್ಯಯನವನ್ನು ಮುಂದುವರೆಸಿದರೂ, ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಕಷ್ಟಕರವಾಗಿಸಿದೆ.