ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಘಟನೆ ರಂಗಚಿನ್ನಾರಿಯ 17ನೇ ವಾರ್ಷಿಕೋತ್ಸವ ಎಡನೀರು ಮಠದಲ್ಲಿ ಜರುಗಿತು. ಮಹಿಳಾ ಘಟಕ 'ನಾರಿ ಚಿನ್ನಾರಿ'ಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ರಂಗಚಿನ್ನಾರಿ ಅಧ್ಯಕ್ಷ ಕಾಸರಗೊಡು ಚಿನ್ನಾ ಸಂಘಟನೆಯ ಹುಟ್ಟು ಹಾಗೂ ನಡೆದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಗಚಿನ್ನಾರಿಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಯಣ ಭಟ್ಟ ಅವರಿಗೆ ಪ್ರದಾನ ಮಾಡಲಾಯಿತು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮೈಸೂರು ಪೇಟ ತೊಡಿಸಿ, ಹಾರಹಾಕಿ ಫಲಪುಷ್ಪ, ಸಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಾಧಕರನ್ನು ಅಭಿನಂದಿಸುವ ಕಾರ್ಯದಿಂದ ಧನ್ಯತಾಭಾವ ವ್ಯಕ್ತವಾಗಿದೆ. ಅನನ್ಯ ಸಾಂಸ್ಕøತಿಕ ಪರಂಪರೆ ಹೊಂದಿರುವ ಶ್ರೀ ಎಡನೀರು ಮಠದಲ್ಲಿ ರಂಗಚಿನ್ನಾರಿ ಹಮ್ಮಿಕೊಂಡಿರುವ ಕಾರ್ಯಕ್ರಮ ಕಲೆ ಹಾಗೂ ಕಲಾವಿದರಿಗೆ ಹೆಚ್ಚಿನ ಮೌಲ್ಯ ಲಭಿಸಿದಂತಾಗಿದೆ ಎಂದು ತಿಳಿಸಿದರು. ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್ ಅದ್ಯಕ್ಷತೆ ವಹಿಸಿದ್ದರು.
ಸಾಹಿತ್ಯ ಕ್ಷೇತ್ರಕ್ಕೆ ನಿಡಿದ ಕೊಡುಗೆಗಾಗಿ ವಿಠಲ ಗಟ್ಟಿ ಉಳಿಯ, ಗಮಕ ಮತ್ತು ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಜಯಲಕ್ಷ್ಮೀ ಕಾರಂತ ಅವರನ್ನು ಸನ್ಮಾನಿಸಲಾಯಿತು. ರಂಗ ಚಿನ್ನಾರಿಯ ಯುವ ಪ್ರಶಸ್ತಿಯನ್ನು ಜಾನಪದಕ್ಷೆತ್ರದ ಪ್ರತಿಭೆ ಸುಜಿತ್ ಕುಮಾರ್ ಹಾಗೂ ಸಂಗೀತ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಪ್ರತಿಭೆ ಮೇಧಾ ಕಾಮತ್ ಅವರಿಗೆ ಪ್ರದಾನ ಮಾಡಲಾಯಿತು. ಡಾ. ನಾ. ದಾಮೋದರ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಪ್ರಶಸ್ತಿ ಭಾಜನರಾದವರಿಗೆ ನಗದು, ಸ್ಮರಣಿಕೆ ನೀಡಲಾಯಿತು. ವೀಣಾಶೆಟ್ಟಿ, ಸರ್ವಮಂಗಳಾ, ಬಬಿತಾ, ಪ್ರಮಿಳಾ ಚುಳ್ಳಿಕಾನ ಹಾಗೂ ಶ್ರೀಲತಾ ಮೈಲಾಟಿ ಪ್ರಶಸ್ತಿ ವಿಜೇತರ ಪರಿಚಯ ನಿಡಿದರು.
ಈ ಸಂದಭ್ ಹಿರಿಯ ಲೇಖಕಿ ಡಾ ರೋಹಿಣಿ ಅಯ್ಯರ್ ಅವರ 'ಸಾಕ್ಷಿ'ಕಾದಂಬರಿಯನ್ನು ಶ್ರೀ ಸಚ್ಚಿದಾನಂದ ಭಾರತಿ ಸವಾಮೀಜಿ ಬಿಡುಗಡೆಗೊಳಿಸಿದರು. ಡ. ರೋಹಿಣಿ ಅಯ್ಯರ್ ಅವರ ಆಪ್ತಸಹಾಯಕಿ ಗಿರಿಜಾಚಂದ್ರನ್ ಮೊದಲ ಕೃತಿ ಸ್ವೀಕರಿಸಿದರು. ಡ. ರೋಹಿಣಿ ಅಯ್ಯರ್ ಅವರ ಪುತ್ರಿ ರೆಮಾ ಅಯ್ಯರ್, ಶ್ರೀ ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ನಿವ್ರತ್ತ ಶಿಕ್ಷಕ ಮಾಧವ ಹೇರಳ, ಅಂತಾರಾಷ್ಟ್ರೀಯ ಖ್ಯಾತಿಯ ಡ್ರಮ್ ಕಲಾವಿದ ಗಣೇಶ್ ಕುಂಬಳೆ ಉಪಸ್ಥಿತರಿದ್ದರು. ಕಾಸರಗೋಡು ಚಿನ್ನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸತೀಶ್ಚಂದ್ರ ಭಂಡಾರಿ ಕೋಳಾರು ವಂದಿಸಿದರು. ಕಾರ್ಯಕ್ರಮದ ಅಮಗವಾಗಿ ಕಿಶೋರ್ ಪೆರ್ಲ ಅವರಿಂದ ಗಾಯನ, ವಿದುಷಿ ಮಾನಸಿ ಸುಧೀರ್ ಮತ್ತು ಬಳಗದವರಿಂದ ನೃತ್ಯ ಪ್ರದರ್ಶನ ನಡೆಯಿತು.