HEALTH TIPS

ಜಿಎಸ್​ಟಿ ಸಂಗ್ರಹದಲ್ಲಿ ದಾಖಲೆ; 1.87 ಲಕ್ಷ ಕೋಟಿ ರೂ. ಸಂಗ್ರಹ!

              ವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಿಚಾರದಲ್ಲಿ ಐತಿಹಾಸಿಕ ಎನ್ನುವಂಥ ದಾಖಲೆ ಆಗಿದ್ದು, ಜಿಎಸ್​ಟಿ ಆರಂಭವಾದ ಬಳಿಕ ಇದೇ ಮೊದಲ ಸಲ ಮಾಸಿಕವಾಗಿ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ. ಇಂಥದ್ದೊಂದು ಹೆಗ್ಗಳಿಕೆಗೆ ಈ ವರ್ಷದ ಏಪ್ರಿಲ್ ಪಾತ್ರವಾಗಿದೆ.

            ಈ ವರ್ಷದ ಏಪ್ರಿಲ್​ನಲ್ಲಿ 1.87 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹಗೊಂಡಿದ್ದು, ಇದು ಜಿಎಸ್​ಟಿ ಆರಂಭವಾದ ಬಳಿಕ ಮಾಸಿಕವಾಗಿ ಸಂಗ್ರಹವಾದ ತೆರಿಗೆ ಪೈಕಿ ಅತ್ಯಧಿಕ ಮೊತ್ತವಾಗಿದೆ. ಕಳೆದ ವರ್ಷದ ಏಪ್ರಿಲ್​ಗೆ ಹೋಲಿಸಿದರೆ ಪ್ರಸಕ್ತ ಏಪ್ರಿಲ್​ನಲ್ಲಿ ಜಿಎಸ್​​ಟಿ ಸಂಗ್ರಹದಲ್ಲಿ ಶೇ. 12 ಏರಿಕೆ ಆಗಿದೆ.

              ಈ ವರ್ಷದ ಏಪ್ರಿಲ್​ನಲ್ಲಿ 1,87,035 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದ್ದು, ಆ ಪೈಕಿ ಸಿಜಿಎಸ್​ಟಿ 38,440 ಕೋಟಿ, ಎಸ್​ಜಿಎಸ್​ಟಿ 47,412 ಕೋಟಿ ರೂ. ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ವರ್ಷದ ಏಪ್ರಿಲ್​ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್​​ಟಿ ಸಂಗ್ರಹವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries