ಕಾಸರಗೋಡು: ಭಾರತೀಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ 14ನೇ ರಾಜ್ಯ ಸಮ್ಮೇಳನ ಮೇ 19 ಮತ್ತು 20 ರಂದು ಕಾಸರಗೋಡಿನಲ್ಲಿ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಬಿಎಂಎಸ್‍ಆರ್‍ಎ ರಾಜ್ಯಾಧ್ಯಕ್ಷ ಕೆ.ಉಪೇಂದ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
19ರಂದು ಬೆಳಗ್ಗೆ ನಡೆಯುವ ರಾಜ್ಯ ಪದಾಧಿಕರಿ ಸಮಿತಿ ಸಭೆಯನ್ನು ಬಿಎಂಎಸ್ ರಾಜ್ಯ ಕೋಶಾಧಿಕಾರಿ ಸಿ. ಬಾಲಚಂದ್ರನ್ ಉದ್ಘಾಟಿಸುವರು. ಕಾಸರಗೋಡು ನಗರಸಭಾಂಗಣದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಸ್ವರ್ಗೀಯ, ವಕೀಲ ಪಿ. ಸುಹಾಸ್ ನಗರದಲ್ಲಿ 20 ರಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಲಿದೆ. ಬೆಳಗ್ಗೆ 10ಕ್ಕೆ ಬಿಎಂಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೆ.ಕೆ.ವಿಜಯಕುಮಾರ್ ಸಮ್ಮೇಳನ ಉದ್ಘಾಟಿಸುವರು, ಬಿಎಂಎಸ್‍ಆರ್‍ಎ ರಾಜ್ಯಾಧ್ಯಕ್ಷ ಕೆ. ಉಪೇಂದ್ರನ್ ಅಧ್ಯಕ್ಷತೆ ವಹಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ವೆಂಕಟಗಿರಿ, ಆರೆಸ್ಸೆಸ್ ಜಿಲ್ಲಾ ಕಾರ್ಯವಾಹ ಪವಿತ್ರನ್ ಕೆ.ಕೆ ಪುರಂ, ಬಿಎಂಎಸ್ ರಾಜ್ಯ ಕಾರ್ಯದರ್ಶಿ ವಕೀಲ ಮುರಳೀಧರನ್, ಕಾಸರಗೋಡು ಜಿಲ್ಲಾಧ್ಯಕ್ಷ ವಿ.ವಿ.ಬಾಲಕೃಷ್ಣನ್, ಕಾರ್ಯದರ್ಶಿ ಗೋವಿಂದನ್ ಮಡಿಕೈ ಪಾಲ್ಗೊಳ್ಳುವರು. ಬಿಎಂಎಸ್ ರಾಜ್ಯ ಸಾರ್ವಜನಿಕ ಕಾರ್ಯದರ್ಶಿ ಜಿ.ಕೆ.ಅಜಿತ್ ಸಮಾರೋಪ ಸಮಾರಂಭ ಉದ್ಘಾಟಿಸುವರು. ಮಧ್ಯಾಹ್ನ ಕಾಸರಗೋಡು ನಗರದಲ್ಲಿ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಮೆರವಣಿಗೆ ನಡೆಯಲಿರುವುದು. ಸಭೆಯಲ್ಲಿ ಚಟುವಟಿಕೆ ವರದಿ, ನಿರ್ಣಯ, ಸಾಂಸ್ಥಿಕ ಚರ್ಚೆ ಮತ್ತು ನೂತನ ಪದಾಧಿಕಾರಿಗಳ ಘೋಷಣೆಯನ್ನು ಒಳಗೊಂಡಿರುತ್ತದೆ. 14 ಜಿಲ್ಲೆಗಳಿಂದ 1000 ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಎಂಎಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಮಡಿಕೈ, ಜತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಬಿಎಂಎಸ್‍ಆರ್‍ಎ ಜಿಲ್ಲಾ ಕಾರ್ಯದರ್ಶಿ ಕೆ.ತೇಜಸ್, ಕೋಶಾಧಿಕಾರಿ ಅರುಣ್ ಉಪಸ್ಥಿತರಿದ್ದರು.