ತಿರುವನಂತಪುರ: ಕೆಎಸ್‍ಇಬಿ ನಷ್ಟದಲ್ಲಿ ನಡೆಯುತ್ತಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಅಗತ್ಯವಿದೆ ಎಂದು ಸಚಿವ ಕೆ. ಕೃಷ್ಣನ್‍ಕುಟ್ಟಿ ತಿಳಿಸಿದ್ದು, ಕಂಪನಿಗಳು ಹೆಚ್ಚಿನ ಬೆಲೆಗೆ ವಿದ್ಯುತ್ ಪಡೆಯುತ್ತಿವೆ ಎಂದಿರುವರು.
ಮಂಡಳಿಯು ವಿದ್ಯುತ್ ದರವನ್ನು ಹೆಚ್ಚಿಸಲು ಕ್ರಮಗಳನ್ನು ಆರಂಭಿಸಿದೆ. ಪ್ರತಿ ಯೂನಿಟ್ ಗೆ 25 ಪೈಸೆಯಿಂದ 80 ಪೈಸೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಜುಲೈ 1ರಿಂದ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆ ಇದೆ. ಕಳೆದ ಬಾರಿ ಶೇ.6.6ರಷ್ಟು ಏರಿಕೆ ಮಾಡಲಾಗಿತ್ತು.
ಹೊಸ ದರಗಳು ಏಪ್ರಿಲ್ 1 ರಿಂದ ಜಾರಿಗೆ ಬರಬೇಕಿತ್ತು. ಆದರೆ ಕಾರ್ಯವಿಧಾನದಲ್ಲಿ ವಿಳಂಬವಾದ ಕಾರಣ, ನಿಯಂತ್ರಣ ಆಯೋಗವು ಜೂನ್ 30 ರವರೆಗೆ ಹಳೆಯ ದರವನ್ನು ಮುಂದುವರಿಸಲು ಅವಕಾಶ ನೀಡಿತು.
ಕೆಎಸ್‍ಇಬಿ ಐದು ವರ್ಷಗಳ ದರ ಏರಿಕೆಗೆ ಮುಂದಾಗಿದೆ. ನಿಯಂತ್ರಣ ಆಯೋಗವು ನಾಲ್ಕು ಕ್ಷೇತ್ರಗಳಲ್ಲಿ ವಿಸ್ತೃತ ತನಿಖೆ ನಡೆಸಿತು. ಹೆಚ್ಚಿನ ಮಾಹಿತಿ ಸಂಗ್ರಹಣೆಯ ಅಗತ್ಯವಿಲ್ಲ ಎಂದು ಆಯೋಗವು ನಿರ್ಣಯಿಸಿದ ನಂತರ ದರವನ್ನು ಹೆಚ್ಚಿಸಲಾಗುವುದು.