ತಿರುವನಂತಪುರಂ: ನಿಗದಿತ ನಿಲುಗಡೆಯಲ್ಲಿ ನಿಲ್ಲಿಸದೆ ರೈಲೊಂದು ಸುಮಾರು 1 ಕಿಲೋಮೀಟರ್ಗಳಷ್ಟು ಮುಂದಕ್ಕೆ ಹೋಗಿ ಆ ನಂತರ ಹಿಂದಕ್ಕೆ ಚಲಿಸಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ತಿರುವನಂತಪುರಂ ಕಡೆಯಿಂದ ಚೆರಿಯಾನಾಡ್ ಕಡೆಯಿಂದ ಹೋಗುತ್ತಿದ್ದ ವೇನಾಡ್ ಎಕ್ಸ್ಪ್ರೆಸ್ನಲ್ಲಿ ಬೆಳಗ್ಗೆ 7:45ರ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸಿಗ್ನಲ್ ಕೊರತೆ
ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ಚೆರಿಯಾಡ್ ನಿಲ್ದಾಣದಲ್ಲಿನ ಸಿಗ್ನಲ್ ಕೊರತೆಯೆ ಈ ದುರ್ಘಟನೆಗೆ ಕಾರಣ ಎಂದು ಹೇಳಿದ್ಧಾರೆ.
ಚೆರಿಯಾಡ್ ಹಾಲ್ಟ್ ಸ್ಟೇಷನ್ ಆಗಿರುವುದರಿಂದ ಇಲ್ಲಿ ಸಿಗ್ನಲ್ ಅಳವಡಿಸಿಲ್ಲ. ಲೋಕೋ ಪೈಲಟ್ಗಳು ರೈಲು ಸುಮಾರು 1 ಕಿಲೋಮೀಟರ್ ಕ್ರಮಿಸಿದ ನಂತರ ಗಮನಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರಿಗೆ ಇದರಿಂದ ಯಾವುದೇ ರೀತಿಯ ಅನಾನುಕೂಲತೆ ಉಂಟಾಗಿಲ್ಲ ಈ ವಿಚಾರವಾಗಿ ಲೋಕೋ ಪೈಲಟ್ಗಳಿಂದ ವಿಸ್ತೃತ ವಿವರಣೆಯನ್ನು ಕೇಳಲಾಗಿದೆ ಎಂದು ತಿಳಿಸಿದ್ಧಾರೆ.