ತಿರುವನಂತಪುರಂ: ರಾಜ್ಯದ ಬಿವರೇಜ್ ಗಳಲ್ಲಿ 2000 ರೂಪಾಯಿ ನೋಟುಗಳನ್ನು ನಿಷೇಧಿಸಲಾಗಿದೆ. ಈ ಸಂಬಂಧ ಬೆವ್ಕೊ ಕಾರ್ಯಾಚರಣೆಗಳ ಪ್ರಧಾನ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದಾರೆ.
ಇನ್ನು ಮುಂದೆ ರಾಜ್ಯದ ಯಾವುದೇ ಬಿವರೇಜ್ ಮಳಿಗೆಗಳಲ್ಲಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಸೂಚಿಸಲಾಗಿದೆ. ನೋಟುಗಳನ್ನು ಸ್ವೀಕರಿಸಿದರೆ ಆಯಾ ವ್ಯವಸ್ಥಾಪಕರೇ ಹೊಣೆಯಾಗುತ್ತಾರೆ ಎಂದೂ ಸುತ್ತೋಲೆಯಲ್ಲಿ ಹೇಳಲಾಗಿದೆ.
ಮೊನ್ನೆ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳ ಚಲಾವಣೆ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಇದರ ನಂತರ, ಬಿವರೇಜ್ ಗಳಲ್ಲಿ 2000 ನೋಟುಗಳನ್ನು ಸಹ ನಿಷೇಧಿಸಲಾಯಿತು. 2000 ರೂಪಾಯಿ ನೋಟುಗಳನ್ನು ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್‍ನಲ್ಲಿ ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು.
ಈ ಸಂದರ್ಭದಲ್ಲಿ ಬಿವರೇಜ್ ಗಳಲ್ಲಿ 2000 ರೂ.ಗಳ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆ-ಶೇಖರಣೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ನಿಷೇಧ ಹೇರಲು ತೀರ್ಮಾನಿಸಲಾಗಿದೆ.