ನವದೆಹಲಿ: 2,000 ರೂ ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ ಪತ್ರ ಅಥವಾ ಗುರುತಿನ ಚೀಟಿ ಕೊಡಬೇಕಿಲ್ಲ ಎಂದು ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪಷ್ಟನೆ ನೀಡಿದೆ.
ನವದೆಹಲಿ: 2,000 ರೂ ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ ಪತ್ರ ಅಥವಾ ಗುರುತಿನ ಚೀಟಿ ಕೊಡಬೇಕಿಲ್ಲ ಎಂದು ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪಷ್ಟನೆ ನೀಡಿದೆ.
ಗ್ರಾಹಕರು 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅಥವಾ ಠೇವಣಿ ಇರಿಸುವ ವೇಳೆ ಅರ್ಜಿ, ಮನವಿ ಸಲ್ಲಿಸಬೇಕೆ ಎಂಬ ಅನುಮಾನಗಳು ಜನರಲ್ಲಿ ಮೂಡಿವೆ. ಈ ಹಿನ್ನೆಲೆಯಲ್ಲಿ ಅನುಮಾನಗಳನ್ನು ಪರಿಹರಿಸಲು ಎಸ್ಬಿಐ ಈ ಸ್ಪಷ್ಟನೆ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಆದರೆ, 2,000 ಮುಖಬೆಲೆಯ ನೋಟುಗಳು ಕಾನೂನುಬದ್ಧ ಮಾನ್ಯತೆ ಹೊಂದಿರುವುದಾಗಿಯೂ ಆರ್ಬಿಐ ಹೇಳಿಕೆಯಲ್ಲಿ ತಿಳಿಸಿತ್ತು.