HEALTH TIPS

ನಮ್ಮ ಸೈನಿಕರ ಮೃತದೇಹಗಳ ಮೇಲೆ 2019ರ ಲೋಕಸಭೆ ಚುನಾವಣೆ ನಡೆದಿತ್ತು: ಸತ್ಯಪಾಲ್ ಮಲಿಕ್

             ಜೈಪುರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು ಪುಲ್ವಾಮಾ ದಾಳಿಯ ವಿಷಯದ ಬಗ್ಗೆ ಮತ್ತೊಮ್ಮೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 2019ರ ಲೋಕಸಭೆ ಚುನಾವಣೆಯು 'ನಮ್ಮ ಸೈನಿಕರ ದೇಹವನ್ನು ಮುಂದಿಟ್ಟುಕೊಂಡು ನಡೆಸಲಾಯಿತು ಮತ್ತು ಈ ಘಟನೆ ಬಗ್ಗೆ ತನಿಖೆಯಾಗಿದ್ದರೆ ಆಗಿನ ಗೃಹ ಸಚಿವರು ರಾಜೀನಾಮೆ ನೀಡಬೇಕಾಗುತ್ತಿತ್ತು' ಎಂದು ಹೇಳಿದರು.

               ಘಟನೆಯ ನಂತರ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದೆ ಆದರೆ ಅವರು ನನಗೆ ಮೌನವಾಗಿರಲು ಹೇಳಿದರು ಎಂದಿದ್ದಾರೆ.

                'ನಮ್ಮ ಸೈನಿಕರ ದೇಹಗಳ ಮೇಲೆ ಚುನಾವಣೆಗಳು (2019ರ ಲೋಕಸಭೆ) ನಡೆದವು ಮತ್ತು ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಒಂದು ವೇಳೆ ತನಿಖೆ ನಡೆದಿದ್ದರೆ, ಅಂದಿನ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ರಾಜೀನಾಮೆ ನೀಡಬೇಕಿತ್ತು. ಅನೇಕ ಅಧಿಕಾರಿಗಳು ಜೈಲು ಪಾಲಾಗುತ್ತಿದ್ದರು ಮತ್ತು ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದ್ದರು' ಎಂದು ಅಲ್ವಾರ್ ಜಿಲ್ಲೆಯ ಬನ್ಸೂರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಲಿಕ್ ಹೇಳಿದ್ದಾರೆ.

              ರಾಜ್ಯವನ್ನು ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೊದಲು ಅವರು ರಾಜ್ಯಪಾಲರಾಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಲಿಕ್ ಧ್ವನಿ ಎತ್ತಿದ್ದರು.

                ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮಲಿಕ್ ಮಾತನಾಡಿ, 2019ರ ಫೆಬ್ರವರಿ 14ರಂದು ಪುಲ್ವಾಮಾ ದಾಳಿ ನಡೆದಾಗ, ಪ್ರಧಾನಿ ನರೇಂದ್ರ ಮೋದಿಯವರು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಶೂಟಿಂಗ್‌ನಲ್ಲಿ ತೊಡಗಿದ್ದರು. ಅವರು ಅಲ್ಲಿಂದ ಹೊರಗೆ ಬಂದಾಗ ಅವರಿಂದ ನನಗೆ ಕರೆ ಬಂತು. ನಮ್ಮ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಅವರು ನಮ್ಮ ತಪ್ಪಿನಿಂದಲೇ ಸತ್ತರು ಎಂದು ನಾನು ಅವರಿಗೆ ಹೇಳಿದೆ. ಅದಕ್ಕವರು ನನಗೆ ಸುಮ್ಮನಿರಲು ಹೇಳಿದರು ಎಂದಿದ್ದಾರೆ.

              2018ರ ಆಗಸ್ಟ್ 23 ಮತ್ತು 2019ರ ಅಕ್ಟೋಬರ್ 30ರ ನಡುವೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಎರಡು ಕಡತಗಳನ್ನು ತೆರವುಗೊಳಿಸಲು ತನಗೆ 300 ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಲಾಗಿತ್ತು ಎಂದು ಮಲಿಕ್ ಹೇಳಿಕೊಂಡಿದ್ದರು.

                 ಸರ್ಕಾರಿ ನೌಕರರಿಗೆ ವೈ ದ್ಯಕೀಯ ವಿಮೆ ಒದಗಿಸುವುದಕ್ಕೆ ಸಂಬಂಧಿಸಿದ ಗುತ್ತಿಗೆ ನೀಡುವಲ್ಲಿ ಹಾಗೂ ಕಿರು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ 2,200 ಕೋಟಿ ರೂ. ಮೊತ್ತದ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಮಲಿಕ್ ಆರೋ ಪಿಸಿದ್ದರು. ಈ ಸಂಬಂಧ ಕಳೆದ ವರ್ಷ ಏಪ್ರಿಲ್‌ನಲ್ಲಿ ಸಿಬಿಐ ಎರಡು ಎಫ್ಐಆರ್‌ಗಳನ್ನು ದಾಖಲಿಸಿತ್ತು. 

                ತಾವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಒದಗಿಸುವಂತೆ ಸಿಬಿಐ ಅಧಿಕಾರಿಗಳು ಮಲಿಕ್ ಅವರನ್ನು ಕೇಳಿದ್ದರು.

               ಅದಾನಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಲಿಕ್, ಅದಾನಿ ಕೇವಲ ಮೂರು ವರ್ಷಗಳಲ್ಲಿ ಹೆಚ್ಚು ಸಂಪತ್ತನ್ನು ಸೃಷ್ಟಿಸಿದ್ದಾರೆ ಮತ್ತು ಅಷ್ಟು ಅವಧಿಯಲ್ಲಿ ಅವರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಸಾಧ್ಯವೇ ಎಂದು ಅಲ್ಲಿದ್ದವರನ್ನು ಕೇಳಿದರು.

              ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅದಾನಿ 20,000 ಕೋಟಿ ಪಡೆದಿದ್ದಾರೆ ಎಂದು ಹೇಳಿದರು ಮತ್ತು ಅದು ಎಲ್ಲಿಂದ ಬಂತು ಎಂಬುದನ್ನು ಸರ್ಕಾರ ತಿಳಿಸಬೇಕು. ಇದಕ್ಕೆ ಪ್ರಧಾನಿ ಉತ್ತರಿಸಲು ಸಾಧ್ಯವಾಗಲಿಲ್ಲ. ಅವರು ಎರಡು ದಿನಗಳ ಕಾಲ ಮಾತನಾಡಿದರು. ಆದರೆ, ಇದೊಂದು ವಿಚಾರಕ್ಕೆ ಉತ್ತರಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಅವರಲ್ಲಿ ಉತ್ತರವಿಲ್ಲ ಮತ್ತು ಅದೆಲ್ಲವೂ ಅವರ (ಮೋದಿ) ಹಣ ಎಂದು ನಾನು ಹೇಳುತ್ತಿದ್ದೇನೆ ಎಂದು ಮಲಿಕ್ ಹೇಳಿದರು.

               ಅವರು ತಮ್ಮ ಮುಖ್ಯಮಂತ್ರಿಗಳಿಂದ ಲೂಟಿ ಮಾಡುತ್ತಾರೆ ಮತ್ತು ಅದನ್ನು ಅದಾನಿಗೆ ನೀಡುತ್ತಾರೆ. ಅವರು ವ್ಯಾಪಾರ ಮಾಡುತ್ತಾರೆ. ಹಾಗಾಗಿ, ಅದು ಅವರ ಹಣ ಎಂದು ಅವರು ಖಚಿತವಾಗಿದ್ದಾರೆ. ನಾನು ಗೋವಾದಲ್ಲಿದ್ದೆ, ಅಲ್ಲಿನ ಮುಖ್ಯಮಂತ್ರಿಯ ಭ್ರಷ್ಟಾಚಾರದ ಬಗ್ಗೆ ನಾನು ಪ್ರಧಾನಿಗೆ ದೂರು ನೀಡಿದ್ದೆ ಮತ್ತು ಅದರ ಪರಿಣಾಮವೇ ನನ್ನನ್ನು ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿಸಲಾಯಿತು ಮತ್ತು ಸಿಎಂ ಹುದ್ದೆಯಲ್ಲಿ ಅವರನ್ನು ಮುಂದುವರೆಸಲಾಯಿತು ಎಂದು ಆರೋಪಿಸಿದರು.

                ಅದಕ್ಕಾಗಿಯೇ ಅವರು ತಮ್ಮ ಮೂಗಿನ ನೇರಕ್ಕೆ ಭ್ರಷ್ಟಾಚಾರ ಮಾಡುತ್ತಾರೆ ಮತ್ತು ಅದರಲ್ಲಿ ಪಾಲು ಹೊಂದಿದ್ದಾರೆ ಮತ್ತು ಸಂಪೂರ್ಣ ಪಾಲು ಅದಾನಿಗೆ ಹೋಗುತ್ತದೆ ಎಂದು ನನಗೆ ಖಾತ್ರಿಯಿದೆ. ಹೀಗಾಗಿ ಸರ್ಕಾರವನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ ಅವರು, ನೀವು ಮತ್ತೆ ಅವರಿಗೆ ಮತ ಚಲಾಯಿಸಿದರೆ ನಂತರ ನಿಮಗೆ ಮತ ಹಾಕಲು ಕೂಡ ಅವಕಾಶ ಸಿಗುವುದಿಲ್ಲ. ನಂತರ, ಪ್ರತಿ ಬಾರಿಯೂ ನಾನು ಗೆಲ್ಲುತ್ತೇನೆ. ಹೀಗಾಗಿ, ಚುನಾವಣೆಗೆ ಏಕೆ ಖರ್ಚು ಮಾಡಬೇಕು ಎಂದು ಅವರು ನಿಮಗೆ ಮತ ಹಾಕಲು ಬಿಡುವುದಿಲ್ಲ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries