ನವದೆಹಲಿ: 'ರೈಲುಗಳ ಕೊರತೆಯಿಂದಾಗಿ ದೇಶದಲ್ಲಿನ ದಟ್ಟಣೆಯ ಮಾರ್ಗಗಳಲ್ಲಿ ರೈಲುಗಳ ಸಂಚಾರ ವಿರಳಗೊಂಡಿತ್ತು. ಈ ಕಾರಣದಿಂದ 2022-23ನೇ ಸಾಲಿನಲ್ಲಿ 96 ಲಕ್ಷ ಜನರಿಗೆ ರೈಲು ಪ್ರಯಾಣ ಸಾಧ್ಯವಾಗಲಿಲ್ಲ' ಎಂದು ರೈಲ್ವೆ ಸಚಿವಾಲಯ ಆರ್‌ಟಿಐವೊಂದಕ್ಕೆ ಉತ್ತರ ನೀಡಿದೆ.

'ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ರೈಲ್ವೆ ಇಲಾಖೆಗೆ ಆರ್‌ಟಿಐ ಸಲ್ಲಿಸಿದ್ದರು. '2022-23ನೇ ಸಾಲಿನಲ್ಲಿ 2.72 ಕೋಟಿ ಪ್ರಯಾಣಿಕರ ಪೈಕಿ 1.76 ಕೋಟಿ ಜನರಿಗಷ್ಟೇ ಪಿಎನ್‌ಆರ್ ನಂಬರ್ ದೊರೆತಿತ್ತು. ಉಳಿದ 96 ಲಕ್ಷ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿಕೊಂಡಿದ್ದರೂ ರೈಲು ಪ್ರಯಾಣ ಸಾಧ್ಯವಾಗಿರಲಿಲ್ಲ' ಎಂದು ಸಚಿವಾಲಯ ಉತ್ತರಿಸಿದೆ.
'ರೈಲಿನ ಸೀಟು ಸಂಖ್ಯೆಯನ್ನು ಹೆಚ್ಚು ಮಾಡುವ ಕುರಿತು ಇಲಾಖೆಯು ಪ್ರಯತ್ನ ನಡೆಸುತ್ತಿದೆ. ಇದಾದ ಬಳಿಕ ಪ್ರಯಾಣಿಕರು ವೇಟಿಂಗ್‌ಲಿಸ್ಟ್‌ನಲ್ಲಿ ಕಾಯುವುದು ತಪ್ಪಲಿದೆ. ಕೋವಿಡ್-19ಕ್ಕೂ ಮೊದಲು 10,186 ರೈಲುಗಳು ದೇಶದಾದ್ಯಂತ ಸಂಚರಿಸುತ್ತಿದ್ದವು. ಪ್ರಸ್ತುತ 10,678 ರೈಲುಗಳು ಸಂಚರಿಸುತ್ತಿವೆ' ಎಂದು ಇಲಾಖೆ ಮಾಹಿತಿ ನೀಡಿದೆ.
ಸರಕು ಸಾಗಣೆ ಪ್ರಮಾಣದಲ್ಲಿ ಏರಿಕೆ: 'ಏಪ್ರಿಲ್‌ನಲ್ಲಿ ಸರಕು ಸಾಗಣೆ ರೈಲಿನಲ್ಲಿ ದಾಖಲೆಯ 126.46 ದಶಲಕ್ಷ ಟನ್‌ನಷ್ಟು ಸರಕುಗಳ ಸಾಗಣೆ ನಡೆದಿದೆ' ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
'2022ರ ಏಪ್ರಿಲ್‌ನ ಸಂಖ್ಯೆಗೆ ಹೋಲಿಸಿದರೆ, ಶೇ 3.5ರಷ್ಟು ಹೆಚ್ಚು ಸರಕುಗಳನ್ನು ಈ 2023ರಲ್ಲಿ ಸಾಗಣೆ ಮಾಡಲಾಗಿದೆ' ಎಂದಿದೆ.