ಮಧ್ಯಪ್ರದೇಶ: ಉಜ್ಜಯಿನಿ ನಗರದ ಮಹಾಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾಕಾಲ್ ಲೋಕ ಕಾರಿಡಾರ್‌ನಲ್ಲಿ ಸ್ಥಾಪಿಸಲಾದ 'ಸಪ್ತಋಷಿಗಳ' ವಿಗ್ರಹಗಳ ಪೈಕಿ ಆರು ಬಿರುಗಾಳಿಯಿಂದ ಕುಸಿದು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶ: ಉಜ್ಜಯಿನಿ ನಗರದ ಮಹಾಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾಕಾಲ್ ಲೋಕ ಕಾರಿಡಾರ್‌ನಲ್ಲಿ ಸ್ಥಾಪಿಸಲಾದ 'ಸಪ್ತಋಷಿಗಳ' ವಿಗ್ರಹಗಳ ಪೈಕಿ ಆರು ಬಿರುಗಾಳಿಯಿಂದ ಕುಸಿದು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
' ಈ ಘಟನೆಗೆ ಕಾರಣವಾದದ್ದು, ರಭಸವಾದ ಗಾಳಿಯಾಗಿದೆ. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಸಂದರ್ಶಕರು ಇದ್ದಾಗ ಯಾವುದೇ ವ್ಯಕ್ತಿಗೆ ಗಾಯಗಳಾಗಿಲ್ಲ. ಮಹಾಕಾಲ ಲೋಕ ಕಾರಿಡಾರ್‌ನಲ್ಲಿ ಒಟ್ಟು 160 ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಸುಮಾರು 10 ಅಡಿ ಎತ್ತರದ ಆರು ಸಪ್ತಋಷಿಗಳ ವಿಗ್ರಹಗಳು ಬಲವಾದ ಗಾಳಿಗೆ ಉರುಳಿಬಿದ್ದಿವೆ' ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ಕುಮಾ ಪುರಷೋತ್ತಮ್ ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್, 'ವಿಗ್ರಹಗಳನ್ನು ತಕ್ಷಣವೇ ಜೀರ್ಣೋದ್ಧಾರ ಮಾಡುವಂತೆ ನಾನು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇನೆ. ಕಳಪೆ ಗುಣಮಟ್ಟದ ನಿರ್ಮಾಣದ ಬಗ್ಗೆ ತನಿಖೆ ನಡೆಸಬೇಕು ಮತ್ತು ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಶಿಕ್ಷಿಸಬೇಕು' ಎಂದು ಹೇಳಿದರು.
ಮಹಾಕಾಲ್ ಲೋಕ ಯೋಜನೆಯ ಒಟ್ಟು ವೆಚ್ಚ 856 ಕೋಟಿ ರೂ.ಗಳಾಗಿದ್ದು, ಮೊದಲ ಹಂತದಲ್ಲಿ 351 ಕೋಟಿ ರೂ. ಆಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕಾಲ್ ಲೋಕ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದರು.