ನವದೆಹಲಿ : ಮುಂದಿನ ಐದು ವರ್ಷಗಳಲ್ಲಿ ಅಂದರೆ 2023-27ರ ಅವಧಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಆದಾಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿ ವರ್ಷ 1.15 ಶತಕೋಟಿ ಡಾಲರ್ ಅಂದರೆ ಸುಮಾರು 900 ಕೋಟಿ ರೂಪಾಯಿ ಪಾಲು ಪಡೆಯಲಿದೆ.
ನವದೆಹಲಿ : ಮುಂದಿನ ಐದು ವರ್ಷಗಳಲ್ಲಿ ಅಂದರೆ 2023-27ರ ಅವಧಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಆದಾಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿ ವರ್ಷ 1.15 ಶತಕೋಟಿ ಡಾಲರ್ ಅಂದರೆ ಸುಮಾರು 900 ಕೋಟಿ ರೂಪಾಯಿ ಪಾಲು ಪಡೆಯಲಿದೆ.
ಇದು ಅಧಿಕೃತ ಅಂಕಿ ಅಂಶ ಅಲ್ಲದಿದ್ದರೂ, ಐಸಿಸಿಯ ವಾರ್ಷಿಕ ಆದಾಯದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿದ ಬಿಸಿಸಿಐಗೆ ಶೇಕಡ 38.50ರಷ್ಟು ಪಾಲನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಪ್ರಭಾವಿ ಐಸಿಸಿ ಸದಸ್ಯರೊಬ್ಬರು ಬಹಿರಂಗಪಡಿಸಿದ್ದಾರೆ. ಐಸಿಸಿ ವಾರ್ಷಿಕ ಆದಾಯ 600 ದಶಲಕ್ಷ ಡಾಲರ್ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 231 ದಶಲಕ್ಷ ಡಾಲರ್ ಬಿಸಿಸಿಐ ಪಾಲಾಗಲಿದೆ.
ಇದು ಪ್ರಸ್ತಾವಿತ ಮಾದರಿಯಾಗಿದ್ದು, ಕ್ರಿಕೆಟ್ ರೇಟಿಂಗ್, ಐಸಿಸಿ ಸ್ಪರ್ಧೆಗಳಲ್ಲಿನ ಸಾಧನೆ, ಕ್ರೀಡೆಗೆ ದೇಣಿಗೆ (ಜಾಹೀರಾತು ಆದಾಯ) ಆಧಾರದಲ್ಲಿ ಸಿದ್ಧಪಡಿಸಲಾಗಿದೆ. ವಾಣಿಜ್ಯ ಅಂಶವನ್ನು ಪರಿಗಣಿಸಿದರೆ ಇದೀಗ ಭಾರತ ದೊಡ್ಡ ಪಾಲನ್ನು ನೀಡುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಬಿಸಿಸಿಐ ಪ್ರಾಬಲ್ಯ ಹಂದಿದ್ದು, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಎರಡನೇ ಗರಿಷ್ಠ ವಾರ್ಷಿಕ ಆದಾಯವಾದ 41.33 ದಶಲಕ್ಷ ಡಾಲರ್ (6.89%) ಪಾಲು ಪಡೆಯಲಿದೆ. ಆಸ್ಟ್ರೇಲಿಯಾ 37.53 ದಶಲಕ್ಷ ಡಾಲರ್ (6.25%) ಮೂರನೇ ಸ್ಥಾನದಲ್ಲಿದೆ. 34.51 ದಶಲಕ್ಷ ಡಾಲರ್ (5.75%) ಆದಾಯದೊಂದಿಗೆ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ.
2018-2022ರ ನಡುವಿನ ಐದು ವರ್ಷದಲ್ಲಿ ಐಸಿಸಿಯ ವಾರ್ಷಿಕ ಆದಾಯ 307 ದಶಲಕ್ಷ ಡಾಲರ್ ಆಗಿದ್ದು, ಈ ಅವಧಿಯಲ್ಲಿ ಒಟ್ಟು 1536 ದಶಲಕ್ಷ ಡಾಲರ್ ಆದಾಯ ಗಳಿಸಿದೆ. ಬಿಸಿಸಿಐ ಐದು ವರ್ಷದಲ್ಲಿ 405 ದಶಲಕ್ಷ ಡಾಲರ್ ಪಾಲು ಪಡೆದಿದೆ. ಈ ಅವಧಿಯಲ್ಲಿ ಭಾರತದ ಪಾಲು ಶೇಕಡ 26ರಷ್ಟಾಗಿತ್ತು.