ಮುಂಬೈ: 2023 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.7 ನ್ನು ದಾಟಿದರೆ ಅದರಲ್ಲಿ ಅಚ್ಚರಿ ಬೇಡ ಎಂದು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಸಿಐಐ ನ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಶಕ್ತಿಕಾಂತ್ ದಾಸ್, ಸೆಂಟ್ರಲ್ ಬ್ಯಾಂಕ್‌ನಿಂದ ಮೇಲ್ವಿಚಾರಣೆ ಸೂಚಕಗಳು ಕಳೆದ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಆವೇಗವನ್ನು ಉಳಿಸಿಕೊಂಡಿದೆ ಆದ್ದರಿಂದ ಜಿಡಿಪಿ ಬೆಳವಣಿಗೆ ಶೇ.7 ನ್ನು ದಾಟಿದರೆ ಅಚ್ಚರಿಪಡಬೇಡಿ ಎಂದು ಹೇಳಿದ್ದಾರೆ.
ಏತನ್ಮಧ್ಯೆ, FY24 ರಲ್ಲಿ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮಾಡಿದ 5.9% ರಷ್ಟು ಕಡಿಮೆ ಅಂದಾಜಿನ ಹೊರತಾಗಿಯೂ ದೇಶ 6.5% ಬೆಳವಣಿಗೆಯನ್ನು ದಾಖಲಿಸುತ್ತದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಸಾಮಾನ್ಯ ಮುಂಗಾರು, ದೃಢವಾದ ಬಂಡವಾಳ ಮತ್ತು ಮೂಲ ವೆಚ್ಚಗಳ ಬಗ್ಗೆ ಆರ್‌ಬಿಐ ವಿಶ್ವಾಸ ಹೊಂದಿದೆ. ಆದಾಗ್ಯೂ, ಜಾಗತಿಕ ಅನಿಶ್ಚಿತತೆಗಳು ಮತ್ತು ವಿಶ್ವಾದ್ಯಂತ ನಿಧಾನಗತಿಯ ಕಾರಣದಿಂದಾಗಿ ಸರಕು ರಫ್ತುಗಳ ವಿಳಂಬ ಸೇರಿದಂತೆ ಅನೇಕ ಅಪಾಯಗಳನ್ನೂ ಶಕ್ತಿಕಾಂತ್ ದಾಸ್ ಉಲ್ಲೇಖಿಸಿದರು.