ಕಾಸರಗೋಡು: ಭಾರತಾಂಬಾ ಸೇವಾ ಪ್ರತಿಷ್ಠಾನ ಕಾಸರಗೋಡು ಮತ್ತು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಗಡಿನಾಡ ಕನ್ನಡ ಕಲೋತ್ಸವ-2023 ಕಾರ್ಯಕ್ರಮ ಮೇ 3ರಂದು ಅಣಂಗೂರು ಶ್ರೀ ಶಾರದಾಂಬಾ ಸಭಾ ಭವನದಲ್ಲಿ ಜರುಗಲಿದೆ.
ಬೆಳಗ್ಗೆ 10ಕ್ಕೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಉದ್ಘಾಟಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕಾಸರಗೋಡು ನಗರಸಭಾ ಸದಸ್ಯ ಪಿ. ರಮೇಶ್, ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ತೆಕ್ಕೆಮೂಲೆ, ಪತ್ರಕರ್ತ ಗಣೇಶ್ ಮುಂಡಾನ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ಜಾನಪದ ನೃತ್ಯ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಯೋಗ ಪ್ರದರ್ಶನನಡೆಯುವುದು. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಜನಾಮಂದಿರ ಸಮಿತಿ ಅಧ್ಯಕ್ಷ ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸುವರು. ಸಂಜೆ6ರಿಂದ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಟ ತಂಡದಿಂದ ಯಕಷಗಾನ ಬೊಂಬೆಯಾಟ ನಡೆಯುವುದು.