HEALTH TIPS

2025ರ ವೇಳೆಗೆ ಭಾರತದ ಲಸಿಕಾ ಮಾರುಕಟ್ಟೆ ಮೌಲ್ಯ ₹ 25,200 ಕೋಟಿ: ಜಿತೇಂದ್ರ ಸಿಂಗ್

               ವದೆಹಲಿ: 'ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡಿರುವ ಭಾರತದ ಲಸಿಕಾ ಮಾರುಕಟ್ಟೆಯು 2025ರ ವೇಳೆಗೆ ₹ 25,200 ಕೋಟಿ ಮೌಲ್ಯದ ವಹಿವಾಟು ತಲುಪುವ ನಿರೀಕ್ಷೆ ಇದೆ' ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

                 ಬ್ರಿಟನ್‌ಗೆ ಅಧಿಕೃತ ಭೇಟಿ ನೀಡಿರುವ ಜಿತೇಂದ್ರ ಸಿಂಗ್, ಬಯೊಟೆಕ್ ಸ್ಟಾರ್ಟ್‌ಅಪ್ಸ್ ಮತ್ತು ಲಸಿಕೆ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತ ಮತ್ತು ಬ್ರಿಟನ್‌ನ ನಡುವಿನ ಸಹಯೋಗಕ್ಕೆ ಕರೆ ನೀಡಿದ್ದಾರೆ.

'ಆರೋಗ್ಯ ರಕ್ಷಣೆಯ, ರೋಗಗಳ ತಡೆಯುವ ನಿಟ್ಟಿನಲ್ಲಿ ಭಾರತದ ಅತ್ಯುನ್ನತ ಸಾಮರ್ಥ್ಯವನ್ನು ಜಗತ್ತು ಈಗೀಗ ಹೆಚ್ಚು ಅರಿಯುತ್ತಿದೆ. ಅಷ್ಟೇ ಅಲ್ಲ, ಭಾರತವು ಈಗ ಹಲವು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ. ಇತ್ತೀಚೆಗಷ್ಟೇ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಯ ಪ್ರಯೋಗವು ಯಶಸ್ವಿಯಾಗಿದೆ. ಹ್ಯೂಮ್ಯನ್ ಪ್ಯಾಪಿಲೊಮವೈರಸ್‌ (ಎಚ್‌ಪಿವಿ) ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ತಡೆಯುವಲ್ಲಿ ಸಹಾಯ ಮಾಡಿದೆ. ದೇಶವು ಎರಡೇ ವರ್ಷಗಳಲ್ಲಿ ನಾಲ್ಕು ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ಭಾರತದ ಲಸಿಕಾ ಮಾರುಕಟ್ಟೆಯು 2025ರ ವೇಳೆಗೆ ₹ 25,200 ಕೋಟಿ ಮೌಲ್ಯವನ್ನು ತಲುಪುವ ನಿರೀಕ್ಷೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

              'ಜೈವಿಕ ವಿಜ್ಞಾನ ಸಚಿವಾಲಯವು, ಕೋವಿಡ್ ಸುರಕ್ಷಾ ಮಿಷನ್ ಅಡಿಯಲ್ಲಿ ನಾಲ್ಕು ಲಸಿಕೆಗಳನ್ನು ಬಿಡುಗಡೆ ಮಾಡಿದೆ. ಕೋವ್ಯಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಲಾಗಿದ್ದು, ಭವಿಷ್ಯದಲ್ಲಿ ಲಸಿಕೆಗಳ ಸುಗಮ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಸೃಷ್ಟಿಸಿದೆ. ಇದರಿಂದಾಗಿ ದೇಶವು ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧತೆಯನ್ನು ಹೊಂದಿದೆ' ಎಂದೂ ಅವರು ಹೇಳಿದ್ದಾರೆ.

               ಸುಮಾರು 175 ವರ್ಷಗಳಷ್ಟು ಹಳೆಯದಾದ ಲಂಡನ್ ವಿಜ್ಞಾನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ಅವರು, 'ಭಾರತದಲ್ಲಿ ಇದೇ ರೀತಿಯ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಯೋಜನೆ ರೂಪಿಸಿದ್ದಾರೆ. ಇಂಥ ವಸ್ತುಸಂಗ್ರಹಾಲಯಗಳು ಯುವಜನರಲ್ಲಿ ಕುತೂಹಲವನ್ನು ಹುಟ್ಟು ಹಾಕುತ್ತದೆ. ವೈಜ್ಞಾನಿಕ ಮನೋಭಾವಕ್ಕೆ ಹಾಗೂ ಸೃಜನಶೀಲ ಆವಿಷ್ಕಾರಕ್ಕೆ ಪ್ರೇರಣೆ ನೀಡಲು ಸಹಾಯಕವಾಗಿದೆ' ಎಂದು ಜಿತೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries