ಕೋಝಿಕ್ಕೋಡ್: ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವು ತ್ವರಿತಗತಿಯಲ್ಲಿ ಸಾಗುತ್ತಿದ್ದು, 2025ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ಗುರುವಾರ ತಿಳಿಸಿದರು.
ಕೋಝಿಕ್ಕೋಡ್‍ನಲ್ಲಿ ನಡೆದ ವ್ಯಾಪಾರಿ ವ್ಯವಸಾಯಿ ಸಮತಿಯ 11ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕಾಸರಗೋಡಿನಿಂದ ತಿರುವನಂತಪುರಂವರೆಗಿನ ರಾಷ್ಟ್ರೀಯ ಹೆದ್ದಾರಿಯ ಪ್ರಗತಿಯಲ್ಲಿ ಸರ್ಕಾರದ ದೃಢವಾದ ಮಧ್ಯಸ್ಥಿಕೆಯನ್ನು ಎತ್ತಿ ಹಿಡಿದ ಸಚಿವರು, ಸಂಚಾರ ದಟ್ಟಣೆಯನ್ನು ನಿವಾರಿಸಲು ಹೆದ್ದಾರಿಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಗಲ ಕಿರಿದಾದ ರಸ್ತೆ ರಾಜ್ಯದಲ್ಲಿ ವ್ಯಾಪಾರ ಚಟುವಟಿಕೆಗಳಲ್ಲಿ ಮಂದಗತಿಗೆ ಕಾರಣವಾಗಿದೆ. ವ್ಯಾಪಾರ ವಲಯದ ಬೆಳವಣಿಗೆಯನ್ನು ಬೆಂಬಲಿಸಲು ಸಿಲ್ವರ್ ಲೈನ್ ಯೋಜನೆಯೊಂದಿಗೆ ಕರಾವಳಿ ಮತ್ತು ಬೆಟ್ಟದ ಹೆದ್ದಾರಿಗಳನ್ನು ಪೂರ್ಣಗೊಳಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ರಾಜ್ಯವು ವ್ಯಾಪಾರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರ್ಯಾಯಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದೆ ಎಂದು ಸಚಿವರು ಪ್ರಸ್ತಾಪಿಸಿದರು. ಸಣ್ಣ ಉದ್ಯಮ ವಲಯದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಮತ್ತು ಕಾಪೆರ್Çರೇಟೀಕರಣವನ್ನು ಉತ್ತೇಜಿಸುವ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕರೆ ನೀಡುವ ಮೂಲಕ ಸಮಿತಿಯ 11 ನೇ ರಾಜ್ಯ ಸಮ್ಮೇಳನವು ಮುಕ್ತಾಯವಾಯಿತು.