ಮುಂಬೈ: ನಗರದಲ್ಲಿ ನಡೆಯುತ್ತಿರುವ ಜಿ-20 ಸಭೆಯನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಡ್ರೋನ್ ಅಥವಾ ಬಲೂನ್‌ಗಳನ್ನು ಹಾರಿಸುವುದನ್ನು ನಿಷೇಧಿಸಿದ್ದಾರೆ.
ಮುಂಬೈ: ನಗರದಲ್ಲಿ ನಡೆಯುತ್ತಿರುವ ಜಿ-20 ಸಭೆಯನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಡ್ರೋನ್ ಅಥವಾ ಬಲೂನ್‌ಗಳನ್ನು ಹಾರಿಸುವುದನ್ನು ನಿಷೇಧಿಸಿದ್ದಾರೆ.
ಪ್ಯಾರಾ-ಗ್ಲೈಡರ್‌ಗಳು, ಎಲ್ಲಾ ರೀತಿಯ ಬಲೂನ್‌ಗಳು, ಗಾಳಿಪಟಗಳು ಮತ್ತು ರಿಮೋಟ್ ಕಂಟ್ರೋಲ್ ಮೈಕ್ರೋಲೈಟ್ ಏರ್‌ಕ್ರಾಫ್ಟ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ ಎಂದು ಸೋಮವಾರ ಉಪ ಪೊಲೀಸ್ ಆಯುಕ್ತರು (ಕಾರ್ಯಾಚರಣೆ) ಸೆಕ್ಷನ್ 144 ರ ಅಡಿಯಲ್ಲಿ ಆದೇಶ ಹೊರಡಿಸಿದ್ದಾರೆ.
ಜಿ 20 ಯ ಶಕ್ತಿ ಪರಿವರ್ತನಾ ಕಾರ್ಯ ಗುಂಪಿನ ಮೂರನೇ ಸಭೆ ಸೋಮವಾರ ಇಲ್ಲಿ ಪ್ರಾರಂಭವಾಗಿದ್ದು, ಜಿ 20 ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ವಿಐಪಿಗಳು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಡ್ರೋನ್‌ಗಳು ಮತ್ತು ಅಂತಹುದೇ ಉಪಕರಣಗಳನ್ನು ಬಳಸಿ ಭಯೋತ್ಪಾದಕರು ಅಥವಾ ಸಮಾಜ ವಿರೋಧಿಗಳು ದಾಳಿ ನಡೆಸುವ ಸಾಧ್ಯತೆ ಇದೆಯೆಂದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
'ಸಭೆಯಲ್ಲಿ ಪಾಲ್ಗೊಳ್ಳುವ ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಪರಿಗಣಿಸಿ, ಮುಂಬೈ ಪೊಲೀಸರು ಸಹರ್, ವಕೋಲಾ, ಬಿಕೆಸಿ, ಬಾಂದ್ರಾ, ಕೊಲಾಬಾ ಮತ್ತು ಆಜಾದ್ ಮೈದಾನ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.