ಶ್ರೀನಗರ (PTI): ಸೋಮವಾರದಿಂದ ಅರಂಭವಾಗಿ ಮೂರು ದಿನಗಳ ಕಾಲ ನಡೆಯಲಿರುವ ಪ್ರವಾಸೋದ್ಯಮದ ಜಿ20 ಕಾರ್ಯಕಾರಿ ಸಭೆಗೆ ಶ್ರೀನಗರವು ಸಜ್ಜಾಗಿದೆ. ಸಭೆಯ ಕಾರಣ ಕಾಶ್ಮೀರ ಕಣಿವೆಯಾದ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶ್ರೀನಗರ ವಿಮಾನ ನಿಲ್ದಾಣದಿಂದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ವರೆಗಿನ ಮಾರ್ಗದವರೆಗೆ ಜಿ20 ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳನ್ನು ಸ್ವಾಗತಿಸಲು ಹೋರ್ಡಿಂಗ್‌ಗಳನ್ನು ಹಾಕಲಾಗಿದೆ. ಉತ್ತರ ಕಾಶ್ಮೀರದ ಗುಲ್ಮಾರ್ಗ್ ಟೂರಿಸ್ಟ್ ರೆಸಾರ್ಟ್ ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮತ್ತು ನೌಕಾಪಡೆಯ ಕಮಾಂಡೊಗಳ ಸಹಾಯದಿಂದ ಪೊಲೀಸರು ಮತ್ತು ಅರೆಸೇನಾ ಪಡೆಗಳು ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿವೆ ಎಂದೂ ಅವರು ಹೇಳಿದ್ದಾರೆ.
ಸ್ಫೋಟಕಗಳನ್ನು ಪರಿಶೀಲಿಸಲು ಸ್ಕ್ಯಾನರ್‌ಗಳು ಮತ್ತು ಶ್ವಾನಪಡೆಯನ್ನು ನಿಯೋಜಿಸಲಾಗಿದೆ. ನಗರದ ಮೂಲಕ ಹಾದುಹೋಗುವ ವಾಹನಗಳ ತಪಾಸಣೆಗೂ ವ್ಯವಸ್ಥೆ ಮಾಡಲಾಗಿದೆ.