ಕಾಸರಗೊಡು: ಕೇರಳ ರಸ್ತೆ ಸರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ ಬಜೆಟ್ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ, ಮೇ 20 ರಂದು ಕಾಸರಗೋಡು ವಿಭಾಗದಿಂದ ಮುನ್ನಾರ್‍ಗೆ ಮನರಂಜನಾ ಪ್ರವಾಸ ಹೊರಡಲಿದೆ.
ಮೊದಲ ದಿನ ಇಡುಕ್ಕಿಯಲ್ಲಿ ಫೆÇೀಟೋ ಪಾಯಿಂಟ್, ಟಾಪ್ ಸ್ಟೇಷನ್, ಕುಂಡಾಲ ಅಣೆಕಟ್ಟು, ಇಕೋ-ಪಾಯಿಂಟ್, ಮಾಟ್ಟುಪೆಟ್ಟಿ ಅಣೆಕಟ್ಟು, ಬೊಟಾನಿಕಲ್ ಗಾರ್ಡನ್, ಫ್ಲವರ್ ಗಾರ್ಡನ್, ಎರಡನೇ ದಿನ ಇರವಿಕುಲಂ ರಾಷ್ಟ್ರೀಯ ಉದ್ಯಾನವನ, ಮರಯೂರು ಸಕ್ಕರೆ ಕಾರ್ಖಾನೆ, ಮುನಿಯರಕಲ್ ಮತ್ತು ಸ್ಯಾಂಡಲ್ ವುಡ್ ಫಾರೆಸ್ಟ್‍ಗೆ ಪ್ರವಾಸವನ್ನು ಯೋಜಿಸಲಾಗಿದೆ. ಮಾರ್ಗ, ಶುಲ್ಕ, ಬುಕಿಂಗ್ ಮತ್ತಿತರ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9495694525, 9446862282, 8075556767)ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.