ಉತ್ತರ ಪ್ರದೇಶ: ಎರಡು ವರ್ಷಗಳಿಂದ ಪ್ರೀತಿಸಿ, ಇನ್ನೇನು ಮದುಗೆ ಆಗೇ ಬಿಟ್ಟಿತು ಎನ್ನುವಷ್ಟರಲ್ಲಿ ವರ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಮದುವೆ ಹೆಣ್ಣು ಬರೋಬ್ಬರಿ 20 ಕಿ.ಮೀ ದೂರ ಚೇಸ್ ಮಾಡಿ ವರನನ್ನು ಮಂಟಪಕ್ಕೆ ಮರಳಿ ಕರೆತರುವಲ್ಲಿ ಯಶಸ್ವಿಯಾಗಿದ್ದಾಳೆ.

ವಧು-ವರರಿಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಳಿಕ ಮನೆಯವರಿಗೆ ತಿಳಿಸಿ, ಸಾಕಷ್ಟು ಮಾತಕಥೆಗಳ ನಂತರ ವಿವಾಹವಾಗಲು ನಿರ್ಧರಿಸಿದ್ದರು. ಅದರಂತೆ ಕಳೆದ ಭಾನುವಾರ ಭೂತೇಶ್ವರನಾಥ ದೇವಾಲಯದಲ್ಲಿ ವಿವಾಹ ಕಾರ್ಯಕ್ರಮ ನಡೆಸಲು ತೀರ್ಮಾನವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ಅಲ್ಲಿಗೆ ಬಂದಿದ್ದವರಿಗೆ ಯಾವುದೇ ಸಿನಿಮಾದ ಸನ್ನಿವೇಶ ನಡೆದಂತೆ ಭಾಸವಾಗಿದೆ!
ಸಂಬಂಧಿಕರೆಲ್ಲರೂ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯುವತಿ ಮದುಮಗಳಂತೆ ಅಲಂಕರಿಸಿಕೊಂಡು ತಾಳಿ ಕಟ್ಟಿಸಿಕೊಳ್ಳಲು ತಯಾರಾಗಿದ್ದಳು. ಆದರೆ ಎಷ್ಟು ಹೊತ್ತು ಕಾದರೂ ವರ ಮಾತ್ರ ಮಂಟಪಕ್ಕೆ ಬರಲೇ ಇಲ್ಲ. ಇದು ಅಲ್ಲಿದ್ದ ಎಲ್ಲರ ಗೊಂದಲಕ್ಕೆ ಕಾರಣವಾಗಿದೆ. ಈ ವೇಳೆ ವರ ಮೆಸೇಜ್ ಮಾಡಿ ತನ್ನ ತಾಯಿಯನ್ನು ಕರೆದುಕೊಂಡು ಬರಲು ಬದೌನ್ಗೆ ಹೋಗುತ್ತಿದ್ದೇನೆ, ಕ್ಷಮಿಸಿ ಎಂದು ಹೇಳಿದ್ದಾನೆ. ಸಂದೇಶ ಓದಿದ ಯುವತಿಗೆ ವರ ಸುಳ್ಳು ಹೇಳುತ್ತಿದ್ದು, ಮದುವೆಯಾಗದೆ ಓಡಿ ಹೋಗುತ್ತಿದ್ದಾನೆ ಎಂಬ ಅನುಮಾನ ಮೂಡಿದೆ.
ತನ್ನ ಅನುಮಾನ ಬಲವಾಗುತ್ತಿದ್ದಂತೆ ಸ್ವಲ್ಪವೂ ತಡಮಾಡದ ವಧು, ರಾಯ್ ಬರೇಲಿಯಿಂದ ಸುಮಾರು 20 ದೂರದ ಭೀಮೋರಾ ಎಂಬಲ್ಲಿಗೆ ಹೋಗಿ ಹುಡುಕಾಡಿದ್ದಾಳೆ. ಈ ವೇಳೆ ಪೊಲೀಸ್ ಠಾಣೆ ಬಳಿ ಮದುವೆ ಗಂಡು ಬಸ್ ಹತ್ತುವಾಗ ಆತನನ್ನು ಹಿಂಬಾಲಿಸಿ ಹಿಡಿದು, ಮತ್ತೆ ಮದುವೆ ಮಂಟಪಕ್ಕೆ ಕರೆ ತಂದು ವಿವಾಹವಾಗಿದ್ದಾಳೆ.