HEALTH TIPS

ಮಿಗ್-21 ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ

                ವದೆಹಲಿ: 'ಭಾರತೀಯ ವಾಯು‍ಪಡೆಯು (ಐಎಎಫ್‌) ಸುಮಾರು 50, ಮಿಗ್‌-21 ಯುದ್ಧ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ' ಎಂದು ಮೂಲಗಳು ಶನಿವಾರ ತಿಳಿಸಿವೆ.

             ಎರಡು ವಾರಗಳ ಹಿಂದೆ ಮಿಗ್‌-21 ವಿಮಾನವೊಂದು ರಾಜಸ್ಥಾನದ ಹನುಮಾನಗಢದ ಮನೆಯೊಂದರ ಮೇಲೆ ಪತನವಾಗಿತ್ತು.

              ಘಟನೆಯಲ್ಲಿ ಮನೆಯಲ್ಲಿದ್ದ ಮೂವರು ಮಹಿಳೆಯರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

              'ಎಲ್ಲಾ ಮಿಗ್‌ ವಿಮಾನಗಳನ್ನೂ ತಾಂತ್ರಿಕ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಸಂಬಂಧಪಟ್ಟ ತಜ್ಞರ ತಂಡವು ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ಅವುಗಳ ಮರು ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ' ಎಂದು ಮೂಲಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries