ನವದೆಹಲಿ: ಟಿಕೆಟ್ ಪಡೆಯದೇ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ನಾಗಾಲೋಟದತ್ತ ಜಿಗಿಯುತ್ತಿದೆ. 2022-23ನೇ ಸಾಲಿನಲ್ಲಿ ಸುಮಾರು 3.6 ಕೋಟಿ ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದು ಇವರಿಂದ ₹2,200 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮಧ್ಯಪ್ರದೇಶದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿನ ಟಿಕೆಟ್‌ರಹಿತ ಪ್ರಯಾಣಿಕರ ಸಂಖ್ಯೆ ಮತ್ತು ಅವರಿಂದ ವಸೂಲಿ ಮಾಡಿದ ದಂಡದ ಮೊತ್ತದ ಮಾಹಿತಿಯನ್ನು ರೈಲ್ವೆ ಇಲಾಖೆಯು ಒದಗಿಸಿದೆ.
2019-2000ರಲ್ಲಿ 1.10 ಕೋಟಿ ಪ್ರಯಾಣಿಕರು, 2021-2022ರಲ್ಲಿ 2.7ಕೋಟಿ ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣಿಸಿ ಸಿಕ್ಕಿಬಿದ್ದಿದ್ದಾರೆ. 2021-22ರಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ, ಟಿಕೆಟ್ ರಹಿತವಾಗಿ ಪ್ರಯಾಣಿಸಿದವರು 32.56 ಲಕ್ಷ ಮಾತ್ರ. ಟಿಕೆಟ್ ಇಲ್ಲದೇ ಪ್ರಯಾಣಿಸಿ ಸಿಕ್ಕಿಬಿದ್ದವರಿಂದ 2020-21ರಲ್ಲಿ ₹ 152 ಕೋಟಿ, 2021-22ರಲ್ಲಿ ₹ 1,574.73 ಕೋಟಿ ಹಾಗೂ 2022-23ರಲ್ಲಿ ₹2,260.05 ಕೋಟಿ ದಂಡ ವಸೂಲಿ ಮಾಡಲಾಗಿದೆ.
2022-23ರಲ್ಲಿ ರೈಲುಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿ ಸಿಕ್ಕಿಬಿದ್ದವರ ಸಂಖ್ಯೆ, ಅನೇಕ ಸಣ್ಣ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚಿದೆ ಎನ್ನಲಾಗಿದೆ.