ಕಾಸರಗೋಡು: ಸಮುದ್ರ ಕರಾವಳಿ ಪ್ರದೇಶದ ಜನತೆಯ ದೂರು ದುಮ್ಮಾನ ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕರಾವಳಿ ಪರಿಷತ್ ಕಾರ್ಯಕ್ರಮ ನಡೆಯಲಿದೆ. ಕರಾವಳಿ ಪ್ರದೇಶದ ಜನರೊಂದಿಗೆ ಸಂವಾದ ನಡೆಸಿ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹಾರ ಕಲ್ಪಿಸಲು ಸಚಿವರುಗಳು ಸ್ಥಳಕ್ಕಾಗಮಿಸಿ ಕರಾವಳಿಯ ನಿವಾಸಿಗಳೊಂದಿಗೆ ಸಂವಾದ ನಡೆಸುವ ನಿಟ್ಟಿನಲ್ಲಿ ಮೇ 23, 24 ಮತ್ತು 25ರಂದು ಜಿಲ್ಲೆಯಲ್ಲಿ ಸಭೆ ನಡೆಸಲಿದ್ದರೆ.
ಮೀನುಗಾರಿಕಾ ಸಚಿವ ಸಜಿ ಚೆರಿಯನ್ ಅಧಿವೇಶನವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಅಹಮದ್ ದೇವರಕೋವಿಲ್ ಭಾಗವಹಿಸುವರು. ಆಯಾ ಪ್ರದೇಶದ ಶಾಸಕರು ಅಧ್ಯಕ್ಷತೆ ವಹಿಸುವರು. ರಾಜ್ಯ ಸರ್ಕಾರದ ಎರಡನೇ ವರ್ಷಾಚರಣೆ ಅಂಗವಾಗಿ ವಿಶೇಷ ಸಭೆ ಆಯೋಜಿಸಲಾಗಿದೆ.
1300ದೂರು ಲಭ್ಯ:
ಮೀನುಗಾರರ ನ್ಯಾಯಸಮ್ಮತ ಬೇಡಿಕೆ ಮತ್ತು ಹಕ್ಕುಗಳನ್ನು ಪರಿಗಣಿಸಿ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರಾವಳಿ ಪರಿಷತ್ತಿನ ಅಂಗವಾಗಿ ಜಿಲ್ಲೆಯಲ್ಲಿ 1300 ದೂರುಗಳು ಲಭ್ಯವಾಗಿದೆ. ಸಚಿವರು, ಜನಪ್ರತಿನಿಧೀಗಳು ಕರಾವಳಿ ಭಾಗದ ಜನರೊಂದಿಗೆ ಸಂವಹನ ನಡೆಸಲಿದ್ದಾರೆ. ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ, ದೂರುಗಳನ್ನು ಸಲ್ಲಿಸಲು ಮತ್ತು ಅವುಗಳನ್ನು ಪರಿಹರಿಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಕರಾವಳಿ ಪರಿಷತ್ ಸಭೆ ಆಯೋಜಿಸಲಾಗಿದ್ದು, ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುತ್ತದೆ.
ಜಿಲ್ಲೆಯಲ್ಲಿ ಕರಾವಳಿ ಪರಿಷತ್:
ಮೇ 23 ರಂದು ಮಧ್ಯಾಹ್ನ 3ಕ್ಕೆ ತ್ರಿಕರಿಪುರ ಪಡನ್ನ ಕಡಪ್ಪುರಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, 24ರಂದು ಬೆಳಗ್ಗೆ 9ರಿಂದ ಕಾಞಂಗಾಡ್ ಮೀನಾಪೀಸ್ ಕಡಪ್ಪುರ ಫಿಶರೀಸ್ ಹೈಯರ್ ಸೆಕೆಂಡರಿ ಸ್ಕೂಲ್ , ಮಧ್ಯಾಹ್ನ 3ರಿಂದ ಉದುಮ ಪಾಲಕುನ್ನು ಸಾಗರ್ ಆಟಡಿಟೋರಿಯಂ, 25ರಂದು 10.30ಕ್ಕೆ ಕಾಸರಗೋಡು ನಗರಸಭಾಂಗಣ, ಸಂಜೆ 4ಕ್ಕೆ ಮಂಜೇಶ್ವರದಲ್ಲಿ ಕರಾವಳಿ ಪರಿಷತ್ ಸಭೆ ಬಡೆಯುವುದು.