ಬದಿಯಡ್ಕ: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ಉತ್ತಮ ಆರೋಗ್ಯವನ್ನು ಹೊಂದಿದರೆ ಆತ ಮಾನಸಿಕವಾಗಿ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಪ್ರಸ್ತುತ ಕಾಲಘಟ್ಟದಲ್ಲಿ ವಿಷಮಯ ಆಹಾರಗಳು ನಮ್ಮ ಹೊಟ್ಟೆಯನ್ನು ಸೇರುವುದು ಅನೇಕ ರೋಗಗಳಿಗೆ ಕಾರಣವಾಗಿದೆ ಎಂದು ಡಾ. ಮಾಲತಿ ಪ್ರಕಾಶ್ ನೀರ್ಚಾಲು ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿವಾಹಿನಿಯ ನೇತೃತ್ವದಲ್ಲಿ ನಡೆಯುತ್ತಿರುವ ಜೀವನಬೋಧೆ 23 ಶಿಬಿರದಲ್ಲಿ ಅವರು ಆರೋಗ್ಯ ಎಂಬ ವಿಚಾರದಲ್ಲಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿಕೊಟ್ಟರು.
ಕೆಲವೊಂದು ಬೇಕರಿಗಳಲ್ಲಿ, ಹೋಟೆಲ್‍ಗಳಲ್ಲಿ ಲಭಿಸುವ ತಿಂಡಿಗಳು ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ. ಮೈದಾದಿಂದ ತಯಾರಿಸಿದ ತಿಂಡಿಗಳು, ಅತಿಯಾದ ಬೇಕರಿ ತಿನಿಸುಗಳನ್ನು ತಿನ್ನಲೇಬಾರದು. ದಿನನಿತ್ಯ ಯೋಗ, ಪ್ರಾಣಾಯಾಮಗಳು, ಉತ್ತಮ ಸಾತ್ವಿಕ ಆಹಾರ ಸೇವನೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಆರೋಗ್ಯದ ಬಗ್ಗೆ ಅನೇಕ ಮಾಹಿತಿಗಳನ್ನು ಹಂಚಿಕೊಂಡರು.
ಬೆಳಗ್ಗೆ ಮಮತಾ ಚಾಲತ್ತಡ್ಕ ಯೋಗ ಧ್ಯಾನ ಪ್ರಾಣಾಯಾಮಗಳನ್ನು ತಿಳಿಸಿಕೊಟ್ಟರು. ಕುಸುಮ ಪೆರ್ಮುಖ ಅಡುಗೆ ವಿಭಾಗದಲ್ಲಿ ಸೇಮಿಗೆ ತಯಾರಿ, ವಿದ್ಯಾ ಉಪ್ಪಂಗಳ ಊಟದ ವಿಚಾರದಲ್ಲಿ ಮಾಹಿತಿಯನ್ನು ತಿಳಿಸಿದರು. ಅವಿಭಕ್ತ ಕುಟುಂಬ ಇಂದು ವಿಚಾರದಲ್ಲಿ ಸತ್ಯವತೀ ಕೊಳಚ್ಚಿಪ್ಪು ಹಾಗೂ ಹವ್ಯಕ ಸಂಸ್ಕøತಿ ಸಂಸ್ಕಾರ ವಿಚಾರದಲ್ಲಿ ವೀಣಾ ಭಾಗವತ ಬೆಂಗಳೂರು ತರಗತಿಯನ್ನು ನಡೆಸಿಕೊಟ್ಟರು. ಶ್ರೀಮಠದ ಪ್ರೇರಣ ತರಬೇತಿ ತಂಡದ ವತಿಯಿಂದ ಜೀವನಕೌಶಲ ಹೊಂದಾಣಿಕೆ ತರಗತಿ ನಡೆಯಿತು. ಭಟ್ ಆಂಡ್ ಭಟ್ ಸುದರ್ಶನ ಭಟ್ ಬೆದ್ರಡಿ, ಗಣೇಶ್ ಭಟ್ ಮುಣ್ಚಿಕ್ಕಾನ ಪೋಡಿ ತಯಾರಿ, ಸುಕ್ರುಂಡೆ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಶುಕ್ರವಾರ ಸಂಜೆ ನಡೆದ ಶಿಬಿರಾಗ್ನಿಯಲ್ಲಿ ಗುರುಮೂರ್ತಿ ನಾಯ್ಕಾಪು ನೇತೃತ್ವ ವಹಿಸಿದ್ದರು. ಅನನ್ಯ ಫೀಡ್ಸ್‍ನ ಮ್ಹಾಲಕ ಗೋವಿಂದ ಭ|ಟ್ ನಿಡ್ಲೆ ಶಿಬಿರಾರ್ಥಿಗಳಿಗೆ ಬೇಗ್, ಗಣೇಶ್ ಭಟ್ ಕಂಬಾರು ಟೋಪಿ ನೀಡಿದ್ದರು. ಪ್ರಕಾಶ್ ಕುಕ್ಕಿಲ, ಸುರೇಶ ಸೂರ್ಡೇಲು, ಕೃಷ್ಣ ಕುಮಾರ ಬೇಳ, ಉಮಾ ಬೇಳ, ಬಾಲಸುಬ್ರಹ್ಮಣ್ಯ ಸರ್ಪಮಲೆ, ಗೀತಾ ಮುಳ್ಳೇರಿಯ, ಈಶ್ವರಿ ಬೇರ್ಕಡವು ಮೊದಲಾದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.