ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮೇ.24ರಂದು ನಾಗದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿರುವುದು. ಇದರೊಂದಿಗೆ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳೂ ನಡೆಯಲಿದೆ.
ಮೇ.20ರಂದು ಸರ್ಪಸಂಸ್ಕಾರ ಆರಂಭಗೊಂಡು ಮೇ.21ರಂದು ಮುಕ್ತಾಯವಾಗಲಿದೆ. ಮೇ.23 ರಂದು ಮಂಗಳವಾರ ಬೆಳಗ್ಗೆ ಪ್ರಾಯಶ್ಚಿತ್ತ ಹೋಮ, ಸಂಜೆ ಪುಣ್ಯಾಹವಾಚನ, ದೇವತಾ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ನೂತನ ನಾಗ ಬಿಂಬ ಜಲಾವಾಸ, ವಾಸ್ತುಬಲಿ. ಮೇ.24ರಂದು ಬೆಳಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 8 ರಿಂದ 9 ರ ಮಧ್ಯೆ ಮಿಥುನ ಲಗ್ನದಲ್ಲಿ ನಾಗದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.