ತಿರುವನಂತಪುರ: ಪ್ರಥಮ ವರ್ಷದ ಹೈಯರ್ ಸೆಕೆಂಡರಿ ಸೇರಲು ಉದ್ದೇಶಿಸಿರುವ ಎಲ್ಲರಿಗೂ ಅವಕಾಶ ನೀಡಲಾಗುತ್ತಿದ್ದು, ಕಳೆದ ವರ್ಷ 81ರ ಹೆಚ್ಚುವರಿ ಬ್ಯಾಚ್ ಈ ವರ್ಷವೂ ಮುಂದುವರಿಯಲಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಮಾಹಿತಿ ನೀಡಿರುವರು. ಶೀಘ್ರವೇ ಸರ್ಕಾರದ ಮಟ್ಟದಲ್ಲಿ ಈ ನಿಟ್ಟಿನ ಆದೇಶ ಬರಲಿದೆ. ಪ್ಲಸ್ ಟು ಫಲಿತಾಂಶ ಈ ತಿಂಗಳ 25 ರದ್ದು ಪ್ರಕಟಗೊಳ್ಳಲಿದೆ ಎಂದವರು ಮಾಹಿತಿ ನೀಡಿರುವರು.
ಮೊದಲ ವರ್ಷದ ಹೈಯರ್ ಸೆಕೆಂಡರಿ ತರಗತಿಗಳು ಜುಲೈ 5 ರಂದು ಪ್ರಾರಂಭವಾಗಲಿವೆ. ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ವೇತನ ನೀಡಿಲ್ಲ ಎಂಬ ಆರೋಪ ಕೇಳಿ ಬಂದರೂ ಚಿಂತೆಯಿಲ್ಲ. ಕೆಲವೊಮ್ಮೆ ತಡವಾಗಿ ಪಾವತಿಸಲಾಗುತ್ತದೆ. ಈ ಹಿಂದೆಯೂ ಹೀಗೆ ನಡೆದಿದ್ದಿದೆ. ಇದು ರಾಜ್ಯದಲ್ಲಿ ಬಿರುಗಾಳಿಯಂತೆ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಯಲ್ಲ. ಯಾವಾಗ ಕೊಡಲಾಗುತ್ತದೆ ಎಂದು ಮಾಧ್ಯಮಗಳಿಗೆ ಹೇಳುವ ಅಗತ್ಯವಿಲ್ಲ ಎಂದರು.
ಮಲಬಾರಿನಲ್ಲಿ ಪ್ಲಸ್ ಒನ್ ಸೀಟು ವಿಚಾರವಾಗಿ ತಾಲೂಕು ಮಟ್ಟದಲ್ಲಿ ಪಟ್ಟಿ ಸಂಗ್ರಹಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ಮಲಬಾರ್ ನಲ್ಲಿ ಈ ಬಾರಿ 225702 ಮಕ್ಕಳು ಪ್ಲಸ್ ಒನ್ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಈಗಿರುವ ಸೀಟುಗಳು ಕೇವಲ 195050. ವ್ಯಾಸಂಗ ಮುಂದುವರಿಸಲು ಅರ್ಹತೆ ಪಡೆದ ಎಲ್ಲರಿಗೂ 30652 ಸೀಟುಗಳ ಕೊರತೆಯಿದೆ. ಸಿಬಿಎಸ್ ಇ ಯಿಂದ ಆಗಮಿಸುವ ಮಕ್ಕಳ ಸಂಖ್ಯೆ ಹೆಚ್ಚಾದರೆ ಮತ್ತೆ ಸೀಟುಗಳ ಸಂಖ್ಯೆಯ ಬೇಡಿಕೆ ಹೆಚ್ಚಾಗಲಿದೆ.
ಹೆಚ್ಚಿನ ಉತ್ತೀರ್ಣತೆಯೊಂದಿಗೆ, ಆಯ್ಕೆಯ ವಿಷಯವನ್ನು ಅಧ್ಯಯನ ಮಾಡುವ ಅವಕಾಶವೂ ಸವಾಲಾಗಿದೆ. ಕಳೆದ ವರ್ಷದಂತೆ ಸೀಟುಗಳನ್ನು ಹೆಚ್ಚಿಸಿರುವುದು ಪರಿಹಾರವಲ್ಲ, ಕಲಿಕೆಯ ಗುಣಮಟ್ಟದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬುದು ಶಿಕ್ಷಕರ ದೂರು.