ನವದೆಹಲಿ: ಬಿಜೆಪಿ ನಾಯಕಿ ಸದ್ಯ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿರುವ ಸ್ಮೃತಿ ಇರಾನಿ ಅವರು ರಾಜಕೀಯಕ್ಕೆ ಬರುವ ಮುನ್ನ ಹಿಂದಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿದವರು. ರಾಜಕೀಯಕ್ಕೂ ಬರುವ ಮುನ್ನ ಅವರು ನಟಿ ಹಾಗೂ ಮಾಡೆಲ್ ಆಗಿದ್ದರು.

ಸದ್ಯ ತಮ್ಮ ಇನ್‌ಸ್ಟಾಗ್ರಾಂನಲ್ಲಿ 25 ವರ್ಷ ಹಳೆಯ ವಿಡಿಯೊವನ್ನು ಹಂಚಿಕೊಂಡು ಅವರು ಗಮನ ಸೆಳೆದಿದ್ದಾರೆ.
ಆ ವಿಡಿಯೊ ಸ್ಮೃತಿ ಇರಾನಿ ಅವರ ಮೊದಲ ಜಾಹೀರಾತು. ಹಾಗೇ ಮೊದಲ ಬಾರಿಗೆ ಕ್ಯಾಮೆರಾ ಫೇಸ್ ಮಾಡಿದ ಅನುಭವ.
'ಇದು 25 ವರ್ಷಗಳ ಹಿಂದಿನ ನನ್ನ ವೃತ್ತಿ ಜೀವನ ಆರಂಭದ ಜಾಹೀರಾತು ವಿಡಿಯೊ. ದೊಡ್ಡ ವಿಶ್‌ಪರ್ ಕಂಪನಿ ಜೊತೆಗಿನ ಜಾಹೀರಾತು. ಈ ರೀತಿಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೆ ಈ ಕ್ಷೇತ್ರದಲ್ಲಿ ಬೆಳೆಯುವುದು ಕಷ್ಟ ಎನ್ನುವ ಹಲವರ ಭಾವನೆ ಅಂದು ಆಗಿತ್ತು. ಅನೇಕರು ಮುಂದೆ ಬರುತ್ತಿರಲಿಲ್ಲ. ಆಗ ನಾನು ಇದನ್ನು ಎದುರಿಸಿದ್ದು.. ಇಂದು ಹಿಂತಿರುಗಿ ನೋಡಿಲ್ಲ' ಎಂದು ಹೇಳಿದ್ದಾರೆ.
ಈ ಜಾಹೀರಾತಿನಲ್ಲಿ ಸ್ಮೃತಿ ಅವರು ತುಂಬಾ ತೆಳ್ಳಗೆ ಕಾಣಿಸಿಕೊಂಡಿದ್ದರ ಬಗ್ಗೆ ನೆಟ್ಟಿಗರು ಹೆಚ್ಚು ಕಮೆಂಟ್‌ಗಳನ್ನು ಮಾಡಿದ್ದಾರೆ.
ಈ ಜಾಹೀರಾತಿನಲ್ಲಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನು ಸ್ಮೃತಿ ಇರಾನಿ ಮುಕ್ತವಾಗಿ ಮಾತನಾಡಿದ್ದಾರೆ.