ನವದೆಹಲಿ (PTI): ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 2.6 ಲಕ್ಷಕ್ಕೂ ಅಧಿಕ ಮತದಾರರು 'ನೋಟಾ' ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದೇ 10ರಂದು ನಡೆದಿದ್ದ ಮತದಾನದ ವೇಳೆ 2,59,278 ಮಂದಿ ಯಾವ ಅಭ್ಯರ್ಥಿಯ ಪರವಾಗಿಯೂ ಮತ ಚಲಾಯಿಸಿಲ್ಲ ಎಂಬುದು ಶನಿವಾರ ಮಧ್ಯಾಹ್ನ 3.30ರವರೆಗಿನ ಆಯೋಗದ ಅಂಕಿ ಅಂಶಗಳಿಂದ ದೃಢಪಟ್ಟಿದೆ.