ಕುಂಬಳೆ: ಪುತ್ತಿಗೆ ಸಮೀಪದ ಮುಗು ಶ್ರೀಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಂಗವಾಗಿ ಗರ್ಭ ಗುಡಿ ಹಾಗೂ ತೀರ್ಥ ಮಂಟಪದ ಮರದ ಕೆಲಸ ಆರಂಭಕ್ಕಾಗಿ ವಿಶೇಷ ಸೀಯಾಳಭಿಷೇಕ, ಬಲಿವಾಡು ಕೂಟ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಮೇ 29ಕ್ಕೆ ಬೆಳಗ್ಗೆ 10 ಕ್ಕೆ ಜರಗಲಿದೆ. ಕಾರ್ಯಕ್ರಮವನ್ನು ಕೊಡುಗೈ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸುವರು. ಉದ್ಯಮಿ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು.
ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನಗೈಯುವರು. ಕ್ಷೇತ್ರದ ತಂತ್ರಿ ದೇಲಂಪಾಡಿ ಗಣೇಶ ತಂತ್ರಿ ಉಪಸ್ಥಿತರಿರುವರು.ಯುಎಇ ಎಕ್ಸ್ ಚೆಂಜ್ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಡಾ.ನಾರಾಯಣ ನಾಯ್ಕ್ ಏಳ್ಕಾನ, ಕರೋಡಿ ಉದಯ ಶಂಕರ ಭಟ್, ವೆಂಕಟ್ರಮಣ ಭಟ್ ಪಳ್ಳ, ರಾಜೀವ್ ರಾವ್ ಎಂ.ಎಲ್, ಸದಾನಂದ ರೈ ಶೇಣಿ, ಅನಿಲ್ ಕಲೆಗಾರ, ಎಂ.ಪಿ.ಬಾಲಕೃಷ್ಣ ಶೆಟ್ಟಿ ಕಿನ್ನಿಮಜಲು, ಶಿವ ಪೂಜಾರಿ, ಕೃಷ್ಣ ಎ, ರಾಧಾಕೃಷ್ಣ ಆಳ್ವ ಮಂಜಕೊಟ್ಟಿಗೆ, ಬಾಲಕೃಷ್ಣ ಭಂಡಾರಿ ಪುತ್ತಿಗೆಬೈಲು ಮೊದಲಾದವರು ಭಾಗವಹಿಸುವರು.ಈ ಸಂದರ್ಭದಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಶ್ರೀದೇವರಿಗೆ ಸೀಯಾಳ ಅಭಿಷೇಕ ಹಾಗೂ ಬಲಿವಾಡು ಕೂಟ ಹಾಗೂ ಪುತ್ತಿಗೆ ವಿಷ್ಣು ಆಚಾರ್ಯರ ಕಾರ್ಮಿಕತ್ವದಲ್ಲಿ ನೂತನ ಗರ್ಭಗುಡಿಯ ಮಾಡಿನ ಮರದ ಕೆಲಸ ಪ್ರಾರಂಭಿಸಲಾಗುತ್ತದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.