ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಎನ್‌ವಿಎಸ್-01 ನ್ಯಾವಿಗೇಷನ್ (ಪಥ ದರ್ಶಕ) ಉಪಗ್ರಹವನ್ನು ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ನೆಲೆಯಿಂದ ಮೇ 29 ರಂದು ಉಡಾವಣೆ ಮಾಡಲಿದೆ.
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಎನ್‌ವಿಎಸ್-01 ನ್ಯಾವಿಗೇಷನ್ (ಪಥ ದರ್ಶಕ) ಉಪಗ್ರಹವನ್ನು ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ನೆಲೆಯಿಂದ ಮೇ 29 ರಂದು ಉಡಾವಣೆ ಮಾಡಲಿದೆ.
'2,232 ಕೆ.ಜಿ ತೂಕದ ಎನ್‌ವಿಎಸ್ -01 ನ್ಯಾವಿಗೇಷನ್ ಉಪಗ್ರಹ ಹೊತ್ತ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ-ಎಫ್12) ರಾಕೆಟ್ ಸೋಮವಾರ ಬೆಳಿಗ್ಗೆ 10.42ಕ್ಕೆ ಉಡಾವಣೆಯಾಗಲಿದೆ' ಎಂದು ಇಸ್ರೊ ಹೇಳಿಕೆಯಲ್ಲಿ ತಿಳಿಸಿದೆ.
ನಾವಿಕ್ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್‌ಸ್ಟೆಲೇಷನ್) ಸೇವೆಗಳಿಗಾಗಿ ತಯಾರಿಸಲಾದ ಎರಡನೇ ತಲೆಮಾರಿನ ಉಪಗ್ರಹಗಳಲ್ಲಿ ಎನ್‌ವಿಎಸ್ -01 ಮೊದಲನೆಯದು.
ಎನ್‌ವಿಎಸ್ ಸರಣಿಯ ಉಪಗ್ರಹಗಳು ನಾವಿಕ್‌ನ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಸರಣಿಯು ನಾವಿಕ್ ಸೇವೆಗಳನ್ನು ವಿಸ್ತರಿಸಲು ಹೆಚ್ಚುವರಿಯಾಗಿ ಎಲ್1 ಬ್ಯಾಂಡ್ ಸಂಕೇತಗಳನ್ನು ಸಂಯೋಜಿಸುತ್ತದೆ. ಈ ಹಿಂದೆ ಉಡಾವಣೆ ಮಾಡಿರುವ ಎಲ್ಲ ಒಂಬತ್ತು ನ್ಯಾವಿಗೇಷನ್ ಉಪಗ್ರಹಗಳಲ್ಲಿ ಆಮದು ಮಾಡಿಕೊಂಡ ಪರಮಾಣು ಗಡಿಯಾರಗಳನ್ನು (ಸಮಯ ಮತ್ತು ಸ್ಥಳ ನಿಖರವಾಗಿ ಗುರುತಿಸಲು ಇವನ್ನು ಬಳಸಲಾಗುತ್ತದೆ) ಬಳಸಲಾಗಿತ್ತು. ಮೊದಲ ಬಾರಿಗೆ ಸ್ವದೇಶಿ ಪರಮಾಣು ಗಡಿಯಾರವನ್ನು ನ್ಯಾವಿಗೇಷನ್ ಉಪಗ್ರಹದಲ್ಲಿ ಬಳಸಿರುವುದು ವಿಶೇಷ ಎಂದು ಇಸ್ರೊ ಹೇಳಿದೆ.