ಪೆರ್ಲ: ಪಡ್ರೆ ಸ್ವರ್ಗ ಮಲೆತ್ತಡ್ಕ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ಜೂ.3 ಮತ್ತು 4ರಂದು ಶ್ರೀ ಕ್ಷೇತ್ರದ ಉಪಸಾನ್ನಿಧ್ಯಗಳಾದ ಅಡ್ಯೆತಕಂಡ ನಾಗಬನ, ಕೆಸರುನಾಗ ಮತ್ತು "ಒಂಜಿ ಕುಂದೊ ನಲ್ಪೊ" ಉಪದೈವಗಳ ಆವಾಸಬನಗಳಲ್ಲಿ ಜೋತಿಷ್ಯರ ನಿರ್ದೇಶನ ಪ್ರಕಾರ ಕ್ಷೇತ್ರ ತಂತ್ರಿ ನೇತೃತ್ವದಲ್ಲಿ ಹೋಮ, ಹವನ, ಪೂಜೆ, ಅರ್ಚನೆ ಮೊದಲಾದ ಪ್ರಾಯಶ್ಚಿತ್ತ ಪರಿಹಾರ ಕ್ರಿಯಾಭಾಗಗಳು ನಡೆಯಲಿವೆ.
ಜೂ.3ರಂದು ಬೆಳಗ್ಗೆ 7:30ಕ್ಕೆ ಮೂಲಸ್ಥಾನದಲ್ಲಿ ಶ್ರೀ ದೈವಕ್ಕೆ ಸೀಯಾಳ ಸಮರ್ಪಣೆ-ಪ್ರಾರ್ಥನೆ_ 8ಕ್ಕೆ ಉಪಾಹಾರ, 8:30ಕ್ಕೆ ಅಡ್ಯೆತಕಂಡ ನಾಗಬನ ಪರಿಸರದಲ್ಲಿ ಗಣ ಹೋಮ, ಕಾಲಮೃತ್ಯುಂಜಯ ಹವನಗಳ ಆರಂಭ.ನಾಗನಿಗೆ ಪವಮಾನ ಕಲಶಾಭೀμÉೀಕ, ತಂಬಿಲ ಸೇವೆ, ಸಮೀಪದ "ಒಂದು ಕುಂದು ನಲುವತ್ತು"ಬನದಲ್ಲಿ ತಂಬಿಲ ಸೇವೆ, ಸ್ವಸ್ತಿಕದಲ್ಲಿ ರಕ್ತೇಶ್ವರಿ ಆವಾಹನೆ-ಆರಾಧನೆ.ಮಧ್ಯಾಹ್ನ 1ರಿಂದ ಬ್ರಾಹ್ಮಣ ಸಂತರ್ಪಣೆ, ಪ್ರಸಾದ ಭೋಜನ.ಸಂಜೆ 4ರಿಂದ ಸುದರ್ಶನ ಹೋಮ, ಮಹಾಭಿಚಾರ ಬಾಧೆಗಳ ಉಚ್ಚಾಟನೆ, ಜ್ಞಾತಾಜ್ಞಾತ ಅಖಿಲ ಜನಪದ ವರ್ಗಗಳ ಪ್ರೇತಾವಾಹನೆ, ರಾತ್ರಿ 8ಕ್ಕೆ ದುರ್ಗಾ ಪೂಜೆ, ಪ್ರಸಾದ ಭೋಜನ, ಜೂ. 4ರಂದು ಬೆಳಗಿನ ಉಪಾಹಾರದ ಬಳಿಕ ಅಡ್ಯೆತಕಂಡ ನಾಗಬನ ಪರಿಸರದಲ್ಲಿ 9ರಿಂದ ತಿಲಹೋಮ, ಚತುರ್ಮೂರ್ತಿ ಆರಾಧನೆ, ನಾಗನಿಗೆ ಅನುಜ್ಞಾಕಲಶ, ಮಧ್ಯಾಹ್ನ 1ರಿಂದ ಬ್ರಾಹ್ಮಣ ಸಂತರ್ಪಣೆ, ಪ್ರಸಾದ ಭೋಜನ ವಿತರಣೆ ನಡೆಯಲಿದೆ.