ನವದೆಹಲಿ: ಶನಿವಾರ ಬ್ರಿಟನ್‌ನ ರಾಜನಾಗಿ ಪಟ್ಟಾಭಿಷೇಕಗೊಂಡ ಕಿಂಗ್ 3ನೇ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.
ನವದೆಹಲಿ: ಶನಿವಾರ ಬ್ರಿಟನ್‌ನ ರಾಜನಾಗಿ ಪಟ್ಟಾಭಿಷೇಕಗೊಂಡ ಕಿಂಗ್ 3ನೇ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.
ವೆಸ್ಟ್‌ಮಿನ್‌ಸ್ಟರ್ ಅಬೆಯಲ್ಲಿ ಶನಿವಾರ ಸಂಪ್ರದಾಯಬದ್ಧವಾಗಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬ್ರಿಟನ್‌ನ 40ನೇ ರಾಜನಾಗಿ 3ನೇ ಚಾರ್ಲ್ಸ್ ಪಟ್ಟಾಧಿಕಾರಕ್ಕೇರಿದರು.
74 ವರ್ಷದ ನೂತನ ರಾಜನ ಕಿರೀಟ ಧಾರಣೆಯ ಸಂಭ್ರಮವನ್ನು ಬ್ರಿಟನ್ ಸೇರಿದಂತೆ ವಿದೇಶಗಳಿಂದ ಆಗಮಿಸಿದ್ದ 2,200ಕ್ಕೂ ಹೆಚ್ಚು ಗಣ್ಯರು ಕಣ್ತುಂಬಿಕೊಂಡರು.
ಬ್ರಿಟನ್ ರಾಜ ಅಥವಾ ರಾಣಿಯ ಹಿರಿಯ ಪುತ್ರ ಅಥವಾ ಪುತ್ರಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗುತ್ತಾರೆ. ಇದು ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಹಾಗಾಗಿ, ರಾಣಿ 2ನೇ ಎಲಿಜಬೆತ್ ಅವರ ಹಿರಿಯ ಪುತ್ರ ಚಾರ್ಲ್ಸ್ ಈಗ ರಾಜನಾಗಿ ಪಟ್ಟಾಧಿಕಾರಕ್ಕೇರಿದ್ದಾರೆ.