HEALTH TIPS

ಮತಾಂತರ; 300 ಸಂತ್ರಸ್ತೆಯರಿಗೆ ಪುನರ್ವಸತಿ: 'ದಿ ಕೇರಳ ಸ್ಟೋರಿ' ನಿರ್ಮಾಪಕರಿಂದ ಘೋಷಣೆ

                  ಮುಂಬೈ: ಮತಾಂತರಕ್ಕೆ ಒಳಗಾಗಿದ್ದಾರೆ ಎನ್ನಲಾದ 300 ಸಂತ್ರಸ್ತೆಯರಿಗೆ ಆಶ್ರಮವೊಂದರಲ್ಲಿ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಮತ್ತು ಅದಕ್ಕಾಗಿ ₹51 ಲಕ್ಷ ಇರಿಸುವುದಾಗಿ 'ದಿ ಕೇರಳ ಸ್ಟೋರಿ' ಚಿತ್ರದ ನಿರ್ಮಾಪಕ ವಿಪುಲ್‌ ಶಾ ಅವರು ಬುಧವಾರ ಘೋಷಿಸಿದರು.

                 'ಸುದೀಪ್ತೊ ಸೇನ್‌ ಅವರು ದಿ ಕೇರಳ ಸ್ಟೋರಿ ಕಥೆ ಬರೆದದ್ದು ಮತ್ತು ನಾವು ಈ ಚಿತ್ರ ನಿರ್ಮಾಣ ಮಾಡಿದ್ದು, ಮತಾಂತರದ ಸಂತ್ರಸ್ತೆಯರಿಗೆ ಒತ್ತಾಸೆಯಾಗಿ ನಿಲ್ಲುವ ಉದ್ದೇಶದಿಂದ. ಸನ್‌ಶೈನ್‌ ಪಿಕ್ಚರ್ಸ್‌ ಮತ್ತು ಚಿತ್ರತಂಡವು ಸಂತ್ರಸ್ತೆಯರಿಗಾಗಿ ₹51 ಲಕ್ಷ ದೇಣಿಗೆ ನೀಡಲಿದೆ. ನಮ್ಮ 'ಪ್ರೊಟೆಕ್ಟ್‌ ದಿ ಡಾಟರ್ಸ್‌' ಉಪಕ್ರಮವೂ ಈ ನಿಟ್ಟಿನಲ್ಲಿ ಒಂದು ಹೆಜ್ಜೆ' ಎಂದು ವಿಪುಲ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

                       ಈ ವೇಳೆ ಚಿತ್ರತಂಡ ಮತ್ತು ಮತಾಂತರದ ಸಂತ್ರಸ್ತೆಯರು ಎನ್ನಲಾದ 26 ಮಹಿಳೆಯರು ವೇದಿಕೆ ಮೇಲೆ ಹಾಜರಿದ್ದರು.

                  'ಈ ಎಲ್ಲಾ ಮಹಿಳೆಯರೂ ತುಂಬಾ ಧೈರ್ಯವಂತೆಯರು. ಪ್ರತಿದಿನ ಸಾಕಷ್ಟು ಅಪಾಯಗಳನ್ನು ಎದುರಿಸುತ್ತಾರೆ. ಆ ಎಲ್ಲಾ ಅಪಾಯಗಳ ನಡುವೆಯೂ ಇಲ್ಲಿ ಮಾತನಾಡಲು ಬಂದಿದ್ದಾರೆ' ಎಂದು ವಿಪುಲ್‌ ಹೇಳಿದರು.

               ಚಿತ್ರದಲ್ಲಿ ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಇದು ಯಾವುದೇ ಧರ್ಮದ ಕುರಿತ ಚಿತ್ರವಲ್ಲ. ಈ ಚಿತ್ರದಲ್ಲಿರುವ ಮೂವರು ಹುಡುಗಿಯರು ದೇಶದ ಸಾವಿರಾರು ಹುಡುಗಿಯರನ್ನು ಪ್ರತಿನಿಧಿಸುತ್ತಾರೆ. ಈ ಚಿತ್ರದಲ್ಲಿ ತೋರಿಸಲಾಗಿರುವ ಪ್ರತಿ ದೃಶ್ಯ, ಆಡಲಾಗಿರುವ ಪ್ರತಿ ಪದವೂ ಸತ್ಯ. ಅವು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿಯುವ ಕುತೂಹಲವಿದ್ದರೆ ವೇದಿಕೆಯಲ್ಲಿರುವ ಮಹಿಳೆಯರನ್ನೇ ಕೇಳಿ' ಎಂದರು.

'ತಾವು ಅನುಭವಿಸಿದ ಸಂಕಷ್ಟಗಳ ಕುರಿತು ಮಾತನಾಡಿದರೆ ಜನರು ತಮ್ಮನ್ನು ವಿಮರ್ಶೆಗೊಳಪಡಿಸುತ್ತಾರೆ ಎಂದು ತಿಳಿದಿದ್ದರೂ ಈ ಮಹಿಳೆಯರು ತಮ್ಮ ಕಥೆಗಳನ್ನು ಹೇಳಲು ಮುಂದೆ ಬಂದಿದ್ದು ಅಭಿನಂದನಾರ್ಹ' ಎಂದು ನಟಿ ಆದಾ ಶರ್ಮಾ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries