ಕುಂಬಳೆ: ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಎಚ್‍ಎಸ್‍ಟಿ ಫಿಸಿಕಲ್ ಸಯನ್ಸ್(ಕನ್ನಡ) ಒಂದು, ಎಚ್‍ಎಸ್‍ಟಿ ಫಿಸಿಕಲ್ ಸಯನ್ಸ್(ಮಲೆಯಾಳ) ಒಂದು, ಎಚ್‍ಎಸ್‍ಟಿ ಗಣಿತ(ಮಲೆಯಾಳ) ಒಂದು, ಎಚ್‍ಎಸ್‍ಟಿ ಹಿಂದಿ ಒಂದು, ಎಚ್‍ಎಸ್ಟಿ ಅರೆಬಿಕ್ ಒಂದು, ಎಚ್‍ಎಸ್‍ಟಿ ಮಲೆಯಾಳ ಒಂದು, ಎಚ್‍ಎಸ್‍ಟಿ ಫಿಸಿಕಲ್ ಎಜ್ಯುಕೇಶನ್(ಪಿಇಟಿ) ಒಂದು ಹುದ್ದೆ ತೆರವಿದೆ.
ಯುಪಿ ವಿಭಾಗದಲ್ಲಿ ಯುಪಿಎಸ್‍ಟಿ ಮಲೆಯಾಳ ಎರಡು, ಯುಪಿಎಸ್‍ಟಿ ಕನ್ನಡ ಒಂದು, ಎಲ್‍ಪಿ ವಿಭಾಗದಲ್ಲಿ ಎಲ್‍ಪಿಎಸ್‍ಟಿ(ಮಲೆಯಾಳ) ಒಂದು, ಎಲ್ ಅರೆಬಿಕ್ ಒಂದು ಹುದ್ದೆಗೆ ದಿನವೇತನದಡಿ ನೇಮಕಾತಿ ನಡೆಯಲಿದೆ. ಅರ್ಹರಾದ ಉದ್ಯೋಗಾರ್ಥಿಗಳು ಮೇ 30ರಂದು ಶಾಲೆಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು. ಪ್ರೌಢಶಾಲಾ ವಿಭಾಗದ ಸಂದರ್ಶನ ಬೆಳಿಗ್ಗೆ 10.30ಕ್ಕೆ, ಪ್ರಾಥಮಿಕ ವಿಭಾಗದ ಸಂದರ್ಶನ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅರ್ಹತೆ ತಿಳಿಯಪಡಿಸುವ ಪ್ರಮಾಣಪತ್ರಗಳ ಅಸಲಿ ಪ್ರತಿಗಳು, ಪಿಎಸ್‍ಸಿ ಪಟ್ಟಿಯಲ್ಲಿರುವವರು, ನೌಕರಿಯಲ್ಲಿ ಮೊದಲು ಅನುಭವ ಇರುವವರು ಸಂಬಂಧಪಟ್ಟ ದಾಖಲೆಪತ್ರಗಳನ್ನು ಹಾಜರುಪಡಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.