ನವದೆಹಲಿ: ಸತತ ಎರಡನೇ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆ ಕಂಡಿದ್ದು, 3.55 ಬಿಲಿಯನ್ ಇದ್ದ ಫಾರೆಕ್ಸ್ ಮೀಸಲು ಈಗ 599.53 ಬಿಲಿಯನ್ ಡಾಲರ್ ಗೆ ಜಿಗಿದಿದೆ.
ಆರ್ ಬಿಐ ಈ ಬಗ್ಗೆ ಮಾಹಿತಿ ನೀಡಿದ್ದು, ಒಟ್ಟಾರೆ ಮೀಸಲು 7.2 ಬಿಲಿಯನ್ ಡಾಲರ್ ನಿಂದ 595.98 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
2021 ರ ಅಕ್ಟೋಬರ್ ನಲ್ಲಿ ವಿದೇಶಿ ವಿನಿಮಯ ಮೀಸಲು ದಾಖಲೆಯ 654 ಬಿಲಿಯನ್ ಡಾಲರ್ ಗೆ ತಲುಪಿತ್ತು.
ಜಾಗತಿಕ ಬೆಳವಣಿಗೆಗಳಿಂದ ಉಂಟಾಗುವ ಒತ್ತಡಗಳ ನಡುವೆ ರೂಪಾಯಿಯನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕ್ ವಿದೇಶಿ ವಿನಿಮಯಗಳನ್ನು ಉಪಯೋಗಿಸುವುದರಿಂದ ಮೀಸಲು ಕುಸಿಯುತ್ತಿದೆ.