ನವದೆಹಲಿ: ಮೂರು ವರ್ಷಗಳ ಅವಧಿಗೆ ಹೊಸದಾಗಿ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೆಹಲಿ ಕೋರ್ಟ್ ಶುಕ್ರವಾರ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಮಂಜೂರು ಮಾಡಿದೆ.
ವಕೀಲರಿಂದ ತುಂಬಿದ್ದ ಕೋರ್ಟ್ ಕೊಠಡಿಯಲ್ಲಿ ಆದೇಶ ಪ್ರಕಟಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ವೈಭವ್ ಮೆಹ್ತಾ, 'ನಿಮ್ಮ ಅರ್ಜಿಯನ್ನು ಭಾಗಶಃ ಪರಿಗಣಿಸಿದ್ದೇನೆ.
'ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅರ್ಜಿದಾರರ ವಿದೇಶ ಪ್ರಯಾಣದ ಹಕ್ಕುಗಳನ್ನು ಸಹ ಪರಿಗಣಿಸಬೇಕು. ಹಾಗಾಗಿ, ಎರಡೂ ಕಡೆಯವರು ಸಲ್ಲಿಸಿದ ಮನವಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ ಅರ್ಜಿದಾರರಿಗೆ ಮೂರು ವರ್ಷಗಳ ಅವಧಿಗೆ ಪಾಸ್ ಪೋರ್ಟ್ ಮತ್ತು ಅದರ ನವೀಕರಣಕ್ಕಾಗಿ ನಿಯಮಾನುಸಾರ ಎನ್‌ಒಸಿ ಮಂಜೂರು ಮಾಡಿದೆ' ಎಂದು ನ್ಯಾಯಾಧೀಶರು ಹೇಳಿದರು.
'ಮೋದಿ' ಪದನಾಮ ಕುರಿತು ನೀಡಿದ್ದ ಮಾನಹಾನಿ ಹೇಳಿಕೆಯಿಂದ ರಾಹುಲ್ ಗಾಂಧಿ ಅವರು ಕೋರ್ಟ್‌ನಲ್ಲಿ ಕ್ರಿಮಿನಲ್ ಶಿಕ್ಷೆಗೆ ಗುರಿಯಾಗಿದ್ದಾರೆ. ಪರಿಣಾಮ ಲೋಕಸಭೆಯಲ್ಲಿನ ಅವರ ಸದಸ್ಯತ್ವ ರದ್ದಾಗಿದೆ. ಇದರಿಂದಾಗಿ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ಕೋರ್ಟ್‌ಗೆ ಒಪ್ಪಿಸಿದ್ದು, ವಯಸ್ಕರಿಗೆ ನೀಡಲಾಗುವ 10 ವರ್ಷದ ಅವಧಿಯ ಸಾಮಾನ್ಯ ಪಾಸ್‌ಪೋರ್ಟ್‌ಗೆ ಎನ್‌ಒಸಿ ಕೋರಿ ಮಂಗಳವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಖಾಸಗಿ ದೂರುದಾರ, ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ, ಸೋನಿಯಾಗಾಂಧಿ ಹಾಗೂ ಇತರರು ಆರೋಪಿಗಳಾಗಿದ್ದಾರೆ.
ರಾಹುಲ್ ಗಾಂಧಿ ಅವರು ಜೂನ್ ಮೊದಲ ವಾರದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊಗೆ ಭೇಟಿ ನೀಡಲಿರುವ ರಾಹುಲ್, ಅನಿವಾಸಿ ಭಾರತೀಯರ ಜತೆ ಸಭೆ ನಡೆಸಲಿದ್ದು, ಬಳಿಕ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕೋರ್ಟ್‌ನಲ್ಲಿ ನಡೆದ ವಾದ- ಪ್ರತಿವಾದವೇನು?
ಇದಕ್ಕೂ ಮೊದಲು ರಾಹುಲ್ ಪರ ವಕೀಲರು, ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಗೆ ರಾಹುಲ್ ಖುದ್ದಾಗಿ ಅಥವಾ ವಕೀಲರ ಮೂಲಕ ನಿಯಮಿತವಾಗಿ ಹಾಜರಾಗುತ್ತಿದ್ದಾರೆ. ವಿಚಾರಣೆಗೆ ಅಡ್ಡಿಪಡಿಸಿಲ್ಲ ಅಥವಾ ವಿಳಂಬ ಮಾಡಿಲ್ಲ. ಪ್ರಕರಣವು ದೂರುದಾರರನ್ನು ಪಾಟೀಸವಾಲಿಗೆ ಒಳಪಡಿಸಬೇಕಾದ ಹಂತದಲ್ಲಿ ಬಾಕಿ ಇದೆ ಎನ್ನುವುದನ್ನು ನ್ಯಾಯಾಧೀಶರ ಗಮನಕ್ಕೆ ತಂದರು.
'ಇದೊಂದು ವಿಶೇಷ ಪ್ರಕರಣ. 10 ವರ್ಷಗಳವರೆಗೆ ಪಾಸ್ ಪೋರ್ಟ್ ನೀಡಬಾರದು. ರಾಹುಲ್ ಅವರ ಭಾರತೀಯ ಪೌರತ್ವವು ಪ್ರಶ್ನಾರ್ಹವಾಗಿದೆ. ರಾಹುಲ್ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಅವರಿಗೆ ಪಾಸ್ ಪೋರ್ಟ್ ಅನ್ನು ಒಂದು ವರ್ಷಕ್ಕೆ ಮಾತ್ರ ನೀಡಬೇಕು ಮತ್ತು ನಂತರ ಪ್ರತಿ ವರ್ಷ ನವೀಕರಿಸಬೇಕು' ಎಂದು ಸ್ವಾಮಿ ವಾದಿಸಿದರು.
ಮನವಿ:ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.