ಛಾತ್ರ (PTI): ಹದಿಮೂರು ವರ್ಷದ ಬಾಲಕಿಯೊಬ್ಬಳು 40 ಅಡಿ ಆಳದ ಬಾವಿಗೆ ಹಾರಿ ಮೂರು ವರ್ಷದ ಮಗುವನ್ನು ರಕ್ಷಿಸಿರುವ ಸಾಹಸಮಯ ಪ್ರಸಂಗ ಛಾತ್ರ ಜಿಲ್ಲೆಯ ಹುಸೈನ್ ಗ್ರಾಮದಲ್ಲಿ ನಡೆದಿದೆ ಎಂದು ಬುಧವಾರ ಗ್ರಾಮಸ್ಥರು ತಿಳಿಸಿದ್ದಾರೆ.
ಛಾತ್ರ (PTI): ಹದಿಮೂರು ವರ್ಷದ ಬಾಲಕಿಯೊಬ್ಬಳು 40 ಅಡಿ ಆಳದ ಬಾವಿಗೆ ಹಾರಿ ಮೂರು ವರ್ಷದ ಮಗುವನ್ನು ರಕ್ಷಿಸಿರುವ ಸಾಹಸಮಯ ಪ್ರಸಂಗ ಛಾತ್ರ ಜಿಲ್ಲೆಯ ಹುಸೈನ್ ಗ್ರಾಮದಲ್ಲಿ ನಡೆದಿದೆ ಎಂದು ಬುಧವಾರ ಗ್ರಾಮಸ್ಥರು ತಿಳಿಸಿದ್ದಾರೆ.
ಈ ಘಟನೆಯು ಭಾನುವಾರ ಸಂಜೆ ನಡೆದಿದೆ. ಶಿವಂ ಕುಮಾರ್ ಎಂಬ ಮಗು ಆಟವಾಡುವ ವೇಳೆ ಬಾವಿಗೆ ಬಿದ್ದಿದೆ. ಮಗು ಬೀಳುತ್ತಿರುವುದನ್ನು ಕಂಡ ಕಾಜಲ್ ಕುಮಾರಿ ಭುಯಿಯಾನ್ ಒಂದು ಕ್ಷಣವೂ ತಡಮಾಡದೇ ತಾನೂ ಬಾವಿಗೆ ಹಾರಿದ್ದಾಳೆ. ಮಗುವನ್ನು ಒಂದು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಬಾವಿಗೆ ಅಳವಡಿಸಿದ್ದ ಪೈಪನ್ನು ಹಿಡಿದು ಇಬ್ಬರೂ ಮುಳುಗದಂತೆ ನಿಭಾಯಿಸಿದ್ದಾಳೆ. ಬಳಿಕ ನೆರವಿಗಾಗಿ ಕೂಗಿದ್ದಾಳೆ. ಆಕೆಯ ಧ್ವನಿ ಕೇಳಿ ಗ್ರಾಮಸ್ಥರು ನೆರವಿಗೆ ಧಾವಿಸುವವರೆಗೂ ಆಕೆ ಪೈಪ್ ಹಿಡಿದೇ ಹೋರಾಟ ನಡೆಸಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಒಂದು ಗಂಟೆ ಬಳಿಕ ಕಾಜಲ್ ಮತ್ತು ಶಿವಂ ಇಬ್ಬರನ್ನೂ ಹಗ್ಗದ ಸಹಾಯದೊಂದಿಗೆ ರಕ್ಷಿಸಲಾಗಿದೆ. ಬಾಲಕಿ ತೀವ್ರಗಾಗಿ ಗಾಯಗೊಂಡಿದ್ದಾಳೆ. ಚಿಕಿತ್ಸೆಗಾಗಿ ಆಕೆಯನ್ನು ಹಝಾರಿಬಾಗ್‌ನ ಶೇಕ್ ಭಿಖಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಅಪೂರ್ವ ಧೈರ್ಯ ಮತ್ತು ಸಾಹಸ ತೋರಿದ ಬಾಲಕಿ ಬಾವಿಗೆ ಬಿದ್ದ ಮಗುವಿನ ಚಿಕ್ಕಮ್ಮ (ಅಮ್ಮನ ತಂಗಿ) ಎಂದು ಹೇಳಲಾಗಿದೆ.