ನವದೆಹಲಿ: ದೇಶದ ಸೇನಾಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ಉತ್ಪಾದಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆಯಡಿ, '928 ಮಿಲಿಟರಿ ವ್ಯವಸ್ಥೆಗಳ' ನಾಲ್ಕನೇ ಪಟ್ಟಿಗೆ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ಸಾರ್ವಜನಿಕ ವಲಯದ ಉದ್ದಿಮೆಗಳು ಶಸ್ತ್ರಾಸ್ತ್ರಗಳ ಆಮದು ಮಾಡಿಕೊಳ್ಳುವುದನ್ನು ಕಡಿಮೆಗೊಳಿಸುವವುದು ಈ ಯೋಜನೆಯ ಉದ್ದೇಶ. ನಾಲ್ಕನೇ ಪಟ್ಟಿಯಲ್ಲಿರುವ ರಕ್ಷಣಾ ವ್ಯವಸ್ಥೆಗಳ ಆಮದು ಮೌಲ್ಯ ₹ 715 ಕೋಟಿ ಆಗಲಿದೆ' ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
2021ರ ಡಿಸೆಂಬರ್, 2022ರ ಮಾರ್ಚ್ ಹಾಗೂ ಆಗಸ್ಟ್‌ನಲ್ಲಿ ಕ್ರಮವಾಗಿ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಮೂರು ಪಟ್ಟಿಗಳು ಒಟ್ಟು 2,500 ರಕ್ಷಣಾ ವ್ಯವಸ್ಥೆಗಳು/ಘಟಕಗಳನ್ನು ಒಳಗೊಂಡಿವೆ. ಈ ಪೈಕಿ, 1,238 ಘಟಕಗಳನ್ನು ನಿಗದಿತ ಕಾಲಾವಧಿಯಲ್ಲಿ ಸ್ಥಳೀಯವಾಗಿಯೇ ಉತ್ಪಾದಿಸಲಾಗುವುದು' ಎಂದು ತಿಳಿಸಿದೆ.
'ದೇಶೀಯವಾಗಿಯೇ ರಕ್ಷಣಾ ವ್ಯವಸ್ಥೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು, ಉನ್ನತ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳನ್ನು ತೊಡಗಿಸಿಕೊಳ್ಳಲಾಗುವುದು' ಎಂದೂ ಸಚಿವಾಲಯ ತಿಳಿಸಿದೆ.