ನವದೆಹಲಿ: ಕೇರಳಕ್ಕೆ ಮುಂಗಾರು ಮಳೆ ಜೂನ್ 4ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ನವದೆಹಲಿ: ಕೇರಳಕ್ಕೆ ಮುಂಗಾರು ಮಳೆ ಜೂನ್ 4ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಕೇರಳಕ್ಕೆ ಜೂನ್ 1ರಂದು ಮುಂಗಾರು ಮಳೆ ಕಾಲಿಡುತ್ತದೆ. ಇದು ಒಂದು ವಾರ ಏರುಪೇರಾಗುವ ಸಾಧ್ಯತೆಯೂ ಇದೆ.
ಈ ವರ್ಷ ಕೇರಳಕ್ಕ ನೈಋತ್ಯ ಮುಂಗಾರು ಆಗಮನ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ನಾಲ್ಕು ದಿನ ತಡವಾಗಿ ಕೇರಳದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ಮುಂಗಾರು ಮಳೆ ಮೇ 29ರಂದು ಪ್ರವೇಶಿಸಿತ್ತು. 2021ರಲ್ಲಿ ಜೂನ್ 3 ಮತ್ತು 2020ರಲ್ಲಿ ಜೂನ್ 1ರಂದು ಮಾನ್ಸೂನ್ ಕಾಲಿಟ್ಟಿತ್ತು. ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಳೆದ ತಿಂಗಳು ತಿಳಿಸಿತ್ತು.
ಮುಂಗಾರು ಮಾರುತದಿಂದ ಮಳೆ ಬೀಳುತ್ತಿದ್ದಂತೆ ರೈತರು ಬೆಳೆಗಳನ್ನು ಬಿತ್ತನೆ ಮಾಡಲು ಪ್ರಾರಂಭಿಸುತ್ತಾರೆ.